ಕೃಷಿ ಯಂತ್ರಧಾರೆ ಕೇಂದ್ರ ಅಲ್ಲಮಪ್ರಭು ಪಾಟೀಲ  ಉದ್ಘಾಟನೆ

Agri
Published on

ಮೆಗಾ-ಮ್ಯಾಕ್ರೋ ಯೋಜನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಹೊರವಲಯದ ತಾಜಸುಲ್ತಾನಪೂರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ೨೦೨೨-೨೩ನೇ ಸಾಲಿನ ಕೆಕೆಆರ್‌ಡಿಬಿ ಅನುದಾನದ ಮೆಗಾ-ಮ್ಯಾಕ್ರೋ ಯೋಜನೆಯಡಿ ಕೃಷಿ ಯಂತ್ರಧಾರೆ ಕೇಂದ್ರಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಭಾನುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕ ಪಾಟೀಲ್, ಕೃಷಿ ಚಟುವಟಿಕೆಗಳಿಗೆ ಬೇಕಾದ ಕೃಷಿ ಯಂತ್ರಗಳು ಮತ್ತು ಉಪಕರಣಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ಬಾಡಿಗೆ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಬೀಜ, ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದು ರೈತರು ಆತಂಕಪಡಬಾರದು. ಎಲ್ಲಾ ರೈತರು ಕಡ್ಡಾಯವಾಗಿ ಬೆಳೆವಿಮೆ ಮಾಡಿಸಬೇಕು. ಅಧಿಕಾರಿಗಳು ಸರ್ಕಾರದ ಸೌಲಭ್ಯ ರೈತರಿಗೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಜಿದಾ ಬೇಗಂ ಮುಜಾವರ್, ಉಪಾಧ್ಯಕ್ಷ ಸಂಜುಕುಮಾರ ಜವಳಕರ, ಪಿಡಿಓ ಅನುಪಮ್, ಚಂದ್ರುಗೌಡ, ಬಸವರಾಜ ಜೀವಣಗಿ, ಸುನೀಲ ಮದನಕರ್, ಭೀಮರಾವ ಮೇಳಕುಂದಾ, ಪ್ರದೀಪ ಪಾಟೀಲ್, ನೀಲಕಂಠ ಭೀಮಳ್ಳಿ, ಶಿವಕುಮಾರ ಮಗಿ, ತೋಲಾ ಭಾಷ, ವಜ್ರಮುನಿ ಸಿಂಗೆ, ವಿಶ್ವನಾಥ ಜಮಾದಾರ, ಸೈದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net