ಜು.7ರಿಂದ ಲಾಂಚ್‌ಗೆ ಎಲ್ಲ ವಾಹನ

5 bkd 3
ಅಂಬಾರಗೋಡ್ಲು- ಕಳಸವಳ್ಳಿ ಮಾರ್ಗದಲ್ಲಿ ಲಾಂಚ್ ಪ್ಲಾಟ್‌ಫಾರ್ಮ್‌ಗೆ ನೀರು ಬಂದಿರುವುದು.
Published on

ಬ್ಯಾಕೋಡು: ಲಿಂಗನಮಕ್ಕಿ ಜಲಾಶಯದ ಒಳಹರಿವು ಹೆಚ್ಚಿದ್ದರಿಂದ ಅಂಬಾರಗೋಡ್ಲು- ಕಳಸವಳ್ಳಿ ಮಾರ್ಗದ ಶರಾವತಿ ಹಿನ್ನೀರಿನ ಲಾಂಚ್‌ನಲ್ಲಿ ಜು.7ರಿಂದ ಎಲ್ಲ ವಾಹನಗಳನ್ನು ಲಾಂಚ್ ಹಾಕಿಕೊಳ್ಳಲಾಗುತ್ತದೆ. ಕಳೆದ 20 ದಿನಗಳಿಂದ ಲಾಂಚ್‌ನಲ್ಲಿ ಕೇವಲ ಜನರು ಮತ್ತು ದ್ವಿಚಕ್ರ ವಾಹನಗಳನ್ನು ಮಾತ್ರ ಹಾಕಲಾಗುತ್ತಿತ್ತು. ಜಲಾಶಯದ ನೀರಿನ ಮಟ್ಟ ಜಾಸ್ತಿ ಆಗಿರುವುದರಿಂದ ಶುಕ್ರವಾರ ಬೆಳಗ್ಗೆಯಿಂದ ಎಲ್ಲ ವಾಹನಗಳನ್ನು ಲಾಂಚ್‌ನಲ್ಲಿ ಸಾಗಿಸಲಾಗುತ್ತದೆ. ಪ್ಲಾಟ್‌ಫಾರ್ಮ್‌ಗೆ ಮೂರೂವರೆ ಅಡಿ ನೀರು ಬಂದಿದ್ದು ಮುಂದಿನ ಎರಡು ದಿನದಲ್ಲಿ ಇನ್ನಷ್ಟು ನೀರು ಬರಲಿದೆ. ಹಾಗಾಗಿ ಲಾಂಚ್‌ನಲ್ಲಿ ವಾಹನಗಳನ್ನು ಸಾಗಿಸಲು ಸಮಸ್ಯೆ ಆಗುವುದಿಲ್ಲ ಎಂದು ಕಡುವು ನಿರೀಕ್ಷಕ ಧನೇಂದ್ರಕುಮಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net