ಪಠ್ಯೇತರ ಚಟುವಟಿಕೆಯಿಂದ ಸರ್ವಾಂಗೀಣ ಬೆಳವಣಿಗೆ: ಇಂದುಶೇಖರ ಕುಲಾಲ್ ಅನಿಸಿಕೆ

Btw_Extra-curricular
Published on

ಬಂಟ್ವಾಳ: ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳನ್ನು ಒದಗಿಸಿದಾಗ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಾಗುತ್ತದೆ.ಅವರಲ್ಲಿ ಆಸಕ್ತಿದಾಯಕ ಕ್ರಿಯಾತ್ಮಕ ಭಾವನೆ ಉಂಟಾಗುತ್ತದೆ. ದೈಹಿಕ ಶಿಕ್ಷಣ ದೈಹಿಕ ಮಾತ್ರವಲ್ಲದೆ ಮಾನಸಿಕ ಸಮತೋಲನವನ್ನು ಉಂಟು ಮಾಡಲು ಸಹಕಾರಿಯಾಗಿದೆ. ಕರಾಟೆ ಜೀವನದಲ್ಲಿ ಬರುವ ಅಪಾಯಕಾರಿ ಸನ್ನಿವೇಶವನ್ನು ಎದುರಿಸಲು ಧೈರ್ಯವನ್ನು ಕೊಡುವ ಒಂದು ಕಲೆಯಾಗಿದೆ, ಪ್ರಾಥಮಿಕ ಹಂತದಲ್ಲಿ ಇದನ್ನು ರೂಡಿಸಿಕೊಳ್ಳಬೇಕು ಎಂದು ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ ಕುಲಾಲ್ ಹೇಳಿದರು.

ಮಜಿ ವೀರಕಂಭದ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರಾಟೆ ತರಗತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಕೊರಗಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮಜಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿ ಚಿನ್ನಾ ಮೈರ, ಕರಾಟೆ ಶಿಕ್ಷಕಿ ನಿವೇದಿತಾ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಬೆನೆಡಿಕ್ಟ್ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ, ಶಿಕ್ಷಕಿ ಸಂಗೀತ ಶರ್ಮ ಪಿ.ಜಿ.ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net