ಪತ್ನಿಗೆ ಇರಿದ ಪತಿಗೆ ನ್ಯಾಯಾಂಗ ಬಂಧನ

stabbed
Published on

ಕಾಸರಗೋಡು: ಪತ್ನಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಚಟ್ಟಂಚಾಲ್ ಬೆಂಡಿಚ್ಚಾಲ್ ನಿವಾಸಿ ಬಿ.ಎ.ಇಸ್ಮಾಯಿಲ್ ಎಂಬಾತನನ್ನು ಮೇಲ್ಪರಂಬ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಕೊಲೆ ಯತ್ನ ಮೊಕದ್ದಮೆ ದಾಖಲಿಸಲಾಗಿದೆ. ಇಸ್ಮಾಯಿಲ್ ತನ್ನ ಪತ್ನಿ ಶಂಸೀನಾರನ್ನು ಇರಿದು ಗಾಯಗೊಳಿಸಿದ್ದು, ಈ ಸಂದರ್ಭ ಬೊಬ್ಬಿಟ್ಟಾಗ ಆಸುಪಾಸಿನವರು ಆಗಮಿಸಿ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net