ಎಲ್ಲ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುತ್ತದೆ : ಡಿಕೆಶಿ ವಿಶ್ವಾಸ

IMG-20240412-WA0041
Published on

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಡಿಕೆಶಿ ಹೇಳಿಕೆ / ರಾಧಾಕೃಷ್ಣ ನಾಮಪತ್ರ ಸಲ್ಲಿಕೆಗೆ ಸಾಥ ನೀಡಿದ ಉಪಮುಖ್ಯಮಂತ್ರಿ
.

ಕಲಬುರಗಿ : ಕಲ್ಯಾಣ ಕರ್ನಾಟಕದ ಎಲ್ಲಾ ಸೀಟ್ ಗೆಲ್ಲುವ ಶಕ್ತಿ ಕೊಟ್ಟಿದೆ. ಬಹಳ ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಉಪ ಮುಖ್ಯ ಮಂತ್ರಿ ಹಾಗೂ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ನಗರದ ಹೊರ ವಲಯದ ವಿಮಾನ ನಿಲ್ದಾಣದಲ್ಲಿ ಇಂದು ಪತ್ರಕರ್ತರ ಜತೆಗೆ ಮಾತನಾಡಿ, ಕಲಬುರಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಧಾಕೃಷ್ಣ ದೊಡ್ಡಮನಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ ಎಂದರು.

ಎನ್ ಐ ಎ ಅವರ ಡ್ಯೂಟಿ ಅವರು ಮಾಡುತ್ತಿದ್ದಾರೆ. ಅವರಿಗೆ ಸಂಪೂರ್ಣವಾದ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಈ ನಡುವೆ ಯಾರನ್ನೋ ಕರೆತಂದಿದ್ದರು ಬಿಟ್ಟು ಕಳುಹಸಿದರು ಎನ್ನುವುದನ್ನು ಇವಾಗ ನಾವು ಮಾತಾಡೋದಕ್ಕಿಂತ ಎನ್ ಐ ಎ ಅವರು ಹೇಳುತ್ತಾರೆ ಎಂದರು.

ಮಾಲೀಕಯ್ಯ ಗುತ್ತೆದಾರ್ ನಮ್ಮ ಆತ್ಮಿಯ ಸ್ನೇಹಿತರು. ಬಿಜೆಪಿಯಲ್ಲಿ ಅವರಿಗೆ ಅನ್ಯಾಯವಾಗಿದೆ. ಕೆಲವೊಂದು ಆಂತರಿಕ ವಿಚಾರಗಳು ಹೇಳೋದಕ್ಕೆ ಆಗೋದಿಲ್ಲ ಎಂದು ಡಿಕೆಶಿ ಹೇಳಿದರು.

ಒಂದು ವರ್ಷದಲ್ಲಿ ರಾಜಕೀಯ ಬದಲಾವಣೆ ಆಗುತ್ತೆ ಅನ್ನೋ ಹೆಚ್ ಡಿ ಕೆ ಹೇಳಿಕೆ ಪ್ರತಿಕ್ರಿಯಿಸಿ, ಬಿಜೆಪಿ ಜೆ ಡಿ ಎಸ್ ಅಲೈನ್ಸ್ ಮುರಿಯುತ್ತೆ , ಬಿಜೆಪಿಯವರು ಅವರನ್ನು ಓಡಿಸುತ್ತಾರೆ. ಇಲ್ಲ ಅಂದ್ರೆ ಜೆ ಡಿ ಎಸ್ ಅವರ ಪಕ್ಷದಲ್ಲಿ ವಿಲೀನವಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net