ಬೆಳ್ತಂಗಡಿ: ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ ಬಂಗಾಡಿ ಇದರ ಚುನಾವಣೆಯಲ್ಲಿ ಸಹಕಾರ ಭಾರತಿ ಎಲ್ಲ 12 ಸ್ಥಾನಗಳನ್ನು ಗೆದ್ದುಕೊಂಡಿದೆ. ಭಾನುವಾರ ನಡೆದ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ ಆನಂದ ಗೌಡ, ವಸಂತಗೌಡ, ಹರೀಶ್ ಸಾಲಿಯಾನ್, ವಿನಯಚಂದ್ರ, ಹರೀಶ್ ಪೂಜಾರಿ, ಪ್ರಮೋದ್ ಕುಲಾಲ್ ವಿಜಯಶಾಲಿಗಳಾಗಿದ್ದಾರೆ.
ಸಾಲಗಾರ ಹಿಂದುಳಿದ ವರ್ಗ ಎ ಕ್ಷೇತ್ರ ದಿಂದ ರಮೇಶ್ ಕೆಂಗಾಜೆ, ಸಾಲಗಾರ ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಶೀನಪ್ಪ ಗೌಡ, ಸಾಲಗಾರ ಮಹಿಳಾ ಕ್ಷೇತ್ರದಿಂದ ಪುಷ್ಪಲತಾ ಕೆ., ವೇದಾವತಿ, ಸಾಲಗಾರ ಪ.ಜಾತಿ ಕ್ಷೇತ್ರದಿಂದ ರಘುನಾಥ, ಸಾಲಗಾರ ಪ.ಪಂಗಡ ಕ್ಷೇತ್ರದಿಂದ ಸತೀಶ್ ನಾಯ್ಕ ಜಯಗಳಿಸಿದ್ದಾರೆ. ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.