ಯಶಸ್ವಿಗೆ ಬೆಳ್ಳಿಗೆಜ್ಜೆ ಸಮರ್ಪಣೆ

Sub_Yashashwini
Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಜಾತ್ರಾ ಮಹೋತ್ಸವದ ಸಂದರ್ಭ ದೇವಳದ ಆನೆ ಯಶಸ್ವಿಗೆ ಬೆಳ್ಳಿಯ ಕಾಲ್ಗೆಜ್ಜೆಯನ್ನು ಚಿಕ್ಕಬಳ್ಳಾಪುರದ ಅಂಬರೀಶ್ ಮತ್ತು ಸ್ನೇಹಿತರು ಸೇವಾರೂಪದಲ್ಲಿ ನೀಡಿದ್ದಾರೆ. ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರಿಗೆ ಅಂಬರೀಶ್ ಮತ್ತು ಸ್ನೇಹಿತರು ಗೆಜ್ಜೆಯನ್ನು ಹಸ್ತಾಂತರಿಸಿದರು.

ಆನೆ ಮಾವುತ ಗುರುಪ್ರಸಾದ್ ಮಲ್ಲಿಗೆಮಜಲು ಯಶಸ್ವಿಗೆ ಗೆಜ್ಜೆಯನ್ನು ತೊಡಿಸಿದರು. ಸುಮಾರು 1 ಕೆಜಿ ತೂಕದ ಬೆಳ್ಳಿಯನ್ನು ಉಪಯೋಗಿಸಿ ಆಕರ್ಷಕವಾಗಿ ಗೆಜ್ಜೆ ತಯಾರಿಸಲಾಗಿದೆ. ಅಂಬರೀಶ್ ಮತ್ತು ಸ್ನೇಹಿತರು ದೇವರ ಮಹಾರಥಕ್ಕೆ, ಒಳಾಂಗಣಕ್ಕೆ, ಹೊರಾಂಗಣಕ್ಕೆ ಸೇವಾರೂಪದಲ್ಲಿ ಕಳೆದ ಹಲವು ವರ್ಷಗಳಿಂದ ಪುಷ್ಪಾಲಂಕಾರ ಸೇವೆ ನೆರವೇರಿಸುತ್ತಾ ಬರುತ್ತಿದ್ದಾರೆ.

ಡಿಸಿ ಮತ್ತು ಎಸಿ ಶ್ಲಾಘನೆ

ಕಳೆದ ಹಲವಾರು ವರುಷಗಳಿಂದ ದೇವರ ಮಹಾರಥಕ್ಕೆ, ದೇವಳದ ಒಳಾಂಗಣಕ್ಕೆ ಉಚಿತವಾಗಿ ಪುಷ್ಪಾಲಂಕಾರ ಸೇವೆ ಮಾಡುವ ಅಂಬರೀಶ್ ಅವರ ಸೇವೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮತ್ತು ದೇವಳದ ಆಡಳಿತಾಧಿಕಾರಿ ಹಾಗೂ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರಾ ಶ್ಲಾಘಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net