ದುಶ್ಚಟಮುಕ್ತ ಸಮಾಜಕ್ಕೆ ಮದ್ಯವರ್ಜನ ಶಿಬಿರ ಸಹಕಾರಿ

8 klg 1
Published on

ಕಲಘಟಗಿ: ದುಶ್ಚಟಮುಕ್ತ ಸಮಾಜ ನಿರ್ವಿುಸಲು ಮದ್ಯವರ್ಜನ ಶಿಬಿರ ಆಯೋಜಿಸಲಾಗುತ್ತಿದ್ದು, ಮದ್ಯವ್ಯಸನ ತ್ಯಜಿಸಿದ ನವಜೀವನ ಸಮಿತಿ ಸದಸ್ಯರು ಇತರ ವ್ಯಸನಗಳತ್ತ ಆಕರ್ಷಿತರಾಗಬಾರದು ಎಂದು ಪ್ರಾದೇಶಿಕ ಕಚೇರಿಯ ಭಾಸ್ಕರ ಎನ್. ಹೇಳಿದರು.


ಪಟ್ಟಣದ ಎಪಿಎಂಸಿ ಸನಿಹದ ಓಂ ಪ್ರಶಾಂತಮ್ ಸಭಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನವಜೀವನ ಸಮಿತಿ ಸದಸ್ಯರ ಮಾಸಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.


ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಆರ್. ತೋಟಗಂಟಿ ಮಾತನಾಡಿ, ವ್ಯಸನಮುಕ್ತರನ್ನಾಗಿಸುವ ಕಾರ್ಯದಲ್ಲಿ ಅದೆಷ್ಟೋ ಕಾಣದ ಕೈಗಳು ಕೆಲಸ ಮಾಡಿವೆ. ಅವರೆಲ್ಲರ ನಿಸ್ವಾರ್ಥದ ಸಫಲತೆಯನ್ನು ಉಳಿಸಿ- ಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು.


ಜನಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಪ್ರಭಾಕರ ನಾಯಕ, ಸದಸ್ಯ ಎ.ವಿ. ಜಯರಾಮನವರ, ಕೋಶಾಧ್ಯಕ್ಷ ಗಂಗಾಧರ ಗೌಳಿ, ಯೋಜನಾಧಿಕಾರಿ ಪ್ರಶಾಂತ ನಾಯ್ಕ ಮಾತನಾಡಿದರು. ವಲಯ ಮೇಲ್ವಿಚಾರಕ ಮಂಜುನಾಥ ರ್ಬಾ ನಿರೂಪಿಸಿದರು. ಮಲ್ಲೇಶಪ್ಪ ಕೋನಿಸಾಗರ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನವಜೀವನ ಸಮಿತಿಯ ಸದಸ್ಯರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net