ಆರೋಗ್ಯಪೂರ್ಣ ಸಮಾಜಕ್ಕೆ ಮದ್ಯವರ್ಜನ ಶಿಬಿರಗಳು ಸಹಕಾರಿ : ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ

New Project (13)
Published on

ಕಾಸರಗೋಡು: ಅಣಂಗೂರಿನಲ್ಲಿ 1930ನೇ ಮದ್ಯವರ್ಜನ ಶಿಬಿರ ಸೋಮವಾರ ಸಮಾರೋಪಗೊಂಡಿತು. ಶಿಬಿರದಲ್ಲಿ ಪಾಲ್ಗೊಂಡಿದ್ದ 67 ಮಂದಿ ಕುಡಿತ ಬಿಟ್ಟು ಹೊಸ ಜೀವನಕ್ಕೆ ಕಾಲಿರಿಸುವ ಬಗ್ಗೆ ದೃಢ ನಿಶ್ಚಯ ಕೈಗೊಂಡರು.

ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮದ್ಯವರ್ಜನ ಶಿಬಿರಗಳು ಸಹಕಾರಿ. ಶಿಬಿರಾರ್ಥಿಗಳು ದೃಢಚಿತ್ತದೊಂದಿಗೆ ಜೀವನ ಮುಂದುವರಿಸಲು ಪಣತೊಟ್ಟಾಗ ಧರ್ಮಸ್ಥಳ ಕ್ಷೇತ್ರ ವತಿಯಿಂದ ನಡೆಸುವ ಇಂತಹ ಶಿಬಿರಗಳು ಹೆಚ್ಚು ಫಲಪ್ರದವಾಗುವುದಾಗಿ ತಿಳಿಸಿದರು.

ಕಾಸರಗೋಡು 1930ನೇ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ವಿದ್ಯುತ್ ನಿಗಮ ಮಂಡಳಿ ಕಾಸರಗೋಡು ಜಿಲ್ಲಾ ಸ್ಥಾಯಿ ಕೌನ್ಸಿಲ್, ವಕೀಲ ಉದಯಕುಮಾರ್ ಗಟ್ಟಿ, ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಗೋಪಾಲ ಶೆಟ್ಟಿ ಅರಿಬೈಲು, ಮಂಜೇಶ್ವರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತೊಟ್ಟತ್ತೋಡಿ, ಭಜನಾ ಪರಿಷತ್ ಅಧ್ಯಕ್ಷ ಡಾ.ವೆಂಕಟ್ರಮಣ ಹೊಳ್ಳ, ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಘಟಕ ಅಧ್ಯಕ್ಷ ಅಖಿಲೇಶ್ ನಗುಮುಗಂ, ಅಶ್ವಥ್ ಪೂಜಾರಿ ಲಾಲ್‌ಭಾಗ್, ಜ್ಞಾನೇಶ್ವರ ಆಚಾರ್ಯ, ಡಾ.ಗಾಯತ್ರಿ, ಜಯಲಕ್ಷ್ಮೀ ಶಿವಶಂಕರ್ ನೆಕ್ರಾಜೆ, ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ, ಯೋಗ ಶಿಕ್ಷಕಿ ತೇಜ ಹರೀಶ್, ಆರೋಗ್ಯ ಸಹಾಯಕಿ ನೇತ್ರಾವತಿ ಉಪಸ್ಥಿತರಿದ್ದರು. ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಶಿಬಿರಾರ್ಥಿಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಸ್ವಾಮೀಜಿ ಬಹುಮಾನ ವಿತರಿಸಿದರು. ಶಿಬಿರ ಸೇವಾರ್ಥಿಗಳನ್ನು ಗೌರವಿಸಿದರು. ಕ್ಷೇತ್ರ ಯೋಜನಾಧಿಕಾರಿ ದಿನೇಶ್ ಸ್ವಾಗತಿಸಿದರು. ಜನಜೀವನ ಸಮಿತಿ ಸದಸ್ಯ ಬಿಜು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net