

ಕಾಸರಗೋಡು: ಜಿಲ್ಲೆಯ ವಿವಿಧೆಡೆ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ, ಗೋವಾ ನಿರ್ಮಿತ ವಿದೇಶಿ ಮದ್ಯ ಹಾಗೂ ವಾರಕ ಮೆಥಾಫಿಟಾಮಿನ್ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ವಿಶೇಷ ದಳ ಸಿಬ್ಬಂದಿ ಮುಟ್ಟತ್ತೋಡಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮಾರಕ ಮೆಥಾಫಿಟಾಮಿನ್ ಸಾಗಿಸುತ್ತಿದ್ದ ಕಲ್ಲಕಟ್ಟ ನಿವಾಸಿ ಅನೀಶ್ ಬಿ. ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ 3.49ಗ್ರಾಂ ಮೆಥಾಫಿಟಮಿನ್ ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕಾಸರಗೋಡು ಕರಂದಕ್ಕಾಡಿನ ಜನವಾಸವಿಲ್ಲದ ಹಿತ್ತಿಲ ಪೊದೆಯಲ್ಲಿ ದಾಸ್ತಾನಿರಿಸಿದ್ದ 180 ಎಂಎಲ್ನ 192ಪ್ಯಾಕೆಟ್ ಮದ್ಯ ಅಬಕಾರಿ ದಳ ಸಿಬ್ಬಂದಿ ವಶಪಡಿಸಿದ್ದಾರೆ. ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ. ಬೇಕೂರಿನಲ್ಲಿ ಅಬಕಾರಿ ದಳ ಸಿಬ್ಬಂದಿ ನಡೆಸಿರುವ ಕಾರ್ಯಾಚರಣೆಯಲ್ಲಿ 8.82 ಲೀ. ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಬೇಕೂರು ಸುಭಾಷ್ನಗರ ನಿವಾಸಿ ಸುಶೀಲನ್ ಎಂಬಾತನನ್ನು ಬಂಧಿಸಲಾಗಿದೆ.