ಮದ್ಯ ಸೇವನೆಯಿಂದ ಹೊರಬರಲು ಚಿಕಿತ್ಸೆ ಅವಶ್ಯ

3mul1
Published on

ಮುಳಗುಂದ: ಮದ್ಯವನ್ನು ಪ್ರಾಣಿಗಳೇ ತಿರಸ್ಕಾರ ಮಾಡುತ್ತವೆ. ಅಂಥದರಲ್ಲಿ ಮನುಷ್ಯರಾದ ನೀವು ಅದನ್ನು ಸ್ವೀಕರಿಸುತ್ತಿರಿ. ಇದು ನಿಜಕ್ಕೂ ಎಲ್ಲರೂ ಅಲೋಚಿಸುವ ವಿಷಯ ಎಂದು ಶಿಕ್ಷಕ ಪಿ.ಎಸ್. ಮರಿದೇವರಮಠ ಅಭಿಪ್ರಾಯಪಟ್ಟರು.


ಭಾನುವಾರ ಪಟ್ಟಣದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಆಯುರ್ ಸ್ಪರ್ಶ ಕ್ಲಿನಿಕ್ ಮತ್ತು ಪಂಚಕರ್ಮ ಕೇಂದ್ರ ಧಾರವಾಡ, ಉನ್ನತಿ ಮಹಿಳಾ ಸಮಾಜ ಸೇವೆ ಹಾಗೂ ವಿವಿದೋದ್ಧೇಶಗಳ ಸಂಘ ಮುಳಗುಂದ, ಅನ್ನಪೂರ್ಣೆಶ್ವರಿ ಮಹಿಳಾ ಸಂಘ, ಜೈ ಮಾತಾ ಜೀಜಾಬಾಯಿ ಕ್ಷತ್ರೀಯ ಮಹಿಳಾ ಮರಾಠ ಸಂಘ ಹಾಗೂ ಕೃಷಿ ವಿಶ್ವ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಮಾತನಾಡಿದರು.


ಡಾ. ರಶ್ಮಿ ಪಾಟೀಲ ಮಾತನಾಡಿ, ಇಂದಿನ ದಿನಮಾನದಲ್ಲಿ ಗಂಡಸರು ಕುಡಿತದ ಚಟಕ್ಕೆ ಅಂಟಿಕೊಂಡಿದ್ದಾರೆ. ಇದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಹೊರಬರಬೇಕೆಂದರೆ ಅವರಿಗೆ ಚಿಕಿತ್ಸೆ ಅವಶ್ಯವಿದೆ ಎಂದರು.


ಉನ್ನತಿ ಮಹಿಳಾ ಸಂಘದ ಅಧ್ಯಕ್ಷೆ ಮಂಗಳಾ ನೀಲಗುಂದ, ಜೀಜಾಬಾಯಿ ಸಂಘದ ಅಧ್ಯಕ್ಷೆ ಗೀತಾ ಜಾಧವ, ಅಕ್ಕಮಹಾದೇವಿ ನೀಲಗುಂದ, ಚೇತನ್ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net