ಮನುಷ್ಯನಿಗೆ ಜ್ಞಾನ ಸಂಪಾದನೆ ಅತ್ಯವಶ್ಯ, ಪಿಡಿಒ ಅಭಿಮತ

SHANKARACHARYA-JAYANTHI
ಅಳವಂಡಿ ಗ್ರಾಪಂನಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು. ಪಿಡಿಒ ಬಸವರಾಜ, ಗ್ರೇಡ್-1 ಕಾರ್ಯದರ್ಶಿ ಕೊಟ್ರಪ್ಪ ಅಂಗಡಿ, ಸಿಬ್ಬಂದಿ ದೇವೇಂದ್ರಪ್ಪರಡ್ಡಿ ಕಲ್ಗುಡಿ, ಶಿವಮೂರ್ತಿ ನಾಯಕ, ಮಾರುತಿ ಮಾಕಾಳಿ, ಸುರೇಶ ಪೂಜಾರ ಇತರರಿದ್ದರು.
Published on

ಅಳವಂಡಿ: ಜ್ಞಾನದ ಮಹತ್ವವನ್ನು ಜಗತ್ತಿಗೆ ಸಾರಿದ ಶಂಕರಾಚಾರ್ಯರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪಿಡಿಒ ಬಸವರಾಜ ಕೀರ್ದಿ ಹೇಳಿದರು.

ಗ್ರಾಮದ ಗ್ರಾಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಮನುಷ್ಯನಿಗೆ ಜ್ಞಾನ ಸಂಪಾದನೆ ಅತ್ಯವಶ್ಯ. ಇದಿಲ್ಲದವನ ಜೀವನ ದುಃಖಮಯವಾಗಿರುತ್ತದೆ ಎಂದರು.

ಗ್ರೇಡ್-1 ಕಾರ್ಯದರ್ಶಿ ಕೊಟ್ರಪ್ಪ ಅಂಗಡಿ, ಸಿಬ್ಬಂದಿ ದೇವೇಂದ್ರಪ್ಪರಡ್ಡಿ ಕಲ್ಗುಡಿ, ಶಿವಮೂರ್ತಿ ನಾಯಕ, ಮಾರುತಿ ಮಾಕಾಳಿ, ಸುರೇಶ ಪೂಜಾರ, ಪ್ರಮುಖರಾದ ಕಾಸಿಂಸಾಬ್ ನದಾಫ್, ರಾಘವೇಂದ್ರ ಇಮ್ಮಡಿ, ಬಸವರಾಜ ತಳಕಲ್, ರಾಮಣ್ಣ ವಾಲಿಕಾರ, ಗುಡದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net