More

    VIDEO: ಕೇದಾರನಾಥದ ಶಂಕರಾಚಾರ್ಯರ ಪುತ್ಥಳಿಗೆ ಮೈಸೂರಿನ ನಂಟು: ಕಲಾವಿದನ ಹುಡುಕಾಟದಲ್ಲಿದ್ದ ಪ್ರಧಾನಿಗೆ ಸಿಕ್ಕಿದ್ದು ಇವರು…

    ನವದೆಹಲಿ: ಉತ್ತರಾಖಂಡದ ಕೇದಾರನಾಥಕ್ಕೆ ಇದಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ಕೊಟ್ಟಿದ್ದು, ಅಲ್ಲಿಯ ಆದಿಗುರು ಶಂಕರಾಚಾರ್ಯರರ ಪ್ರತಿಮೆ ಅನಾವರಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ.

    2013ರಲ್ಲಿ ಉತ್ತರಾಖಂಡದಲ್ಲಿ ಭಾರಿ ಪ್ರವಾಹ ಉಂಟಾದ ನಂತರ ಕೇದಾರನಾಥದಲ್ಲಿರುವ ಆದಿ ಶಂಕರಾಚಾರ್ಯರ ಸಮಾಧಿ ಕೊಚ್ಚಿಹೋಗಿತ್ತು. ಇದಾದ ಬಳಿಕ ಅದನ್ನು ಮರುನಿರ್ಮಿಸಲಾಗಿದೆ. ಕೇಂದ್ರ ಸರ್ಕಾರ ಹಾಗೂ ಉತ್ತರಾಖಂಡ ಸರ್ಕಾರಗಳು ಜಂಟಿಯಾಗಿ ಕೇದಾರೇಶ್ವರ ದೇವಾಲಯದ ಹಿಂಭಾಗದಲ್ಲಿ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಈ ಪುತ್ಥಳಿ ಸ್ಥಾಪಿಸಿವೆ.

    ವಿಶೇಷ ಎಂದರೆ, ಈ ಶಂಕರಾಚಾರ್ಯರ ಪುತ್ಥಳಿಗೆ ಮೈಸೂರಿನ ನಂಟಿದೆ. ಈ ಪುತ್ಥಳಿಯನ್ನು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಇದನ್ನು ನಿರ್ಮಿಸಿದ್ದಾರೆ. ಕೇದಾರನಾಥದಲ್ಲಿ ಇಂಥದ್ದೊಂದು ಪುತ್ಥಳ ನಿರ್ಮಾಣಕ್ಕೆ ಯಾರು ಅರ್ಹರು ಎಂದು ಪ್ರಧಾನಿ ಕಾರ್ಯಾಲಯವು ಹುಡುಕಾಟದಲ್ಲಿ ತೊಡಗಿದ್ದಾರೆ ಸಿಕ್ಕಿದ್ದು ಕಲಾವಿದ ಅರುಣ್‌ ಯೋಗಿರಾಜ್‌. ಯೋಗಿರಾಜ್‌ ಅವರು ತಮ್ಮ ಪುತ್ರ ಅರುಣ್‌ ಜೊತೆ ಸೇರಿ ಶಂಕರರ ಪುತ್ಥಳಿ ಕೆತ್ತಿದ್ದಾರೆ. 2020ರ ಸೆಪ್ಟೆಂಬರ್‌ನಲ್ಲಿ ಕೆತ್ತನೆ ಆರಂಭಿಸಿದ ಅವರು ಇತ್ತೀಚೆಗೆ ಪೂರ್ಣಗೊಳಿಸಿದ್ದರು.

    VIDEO: ಕೇದಾರನಾಥದ ಶಂಕರಾಚಾರ್ಯರ ಪುತ್ಥಳಿಗೆ ಮೈಸೂರಿನ ನಂಟು: ಕಲಾವಿದನ ಹುಡುಕಾಟದಲ್ಲಿದ್ದ ಪ್ರಧಾನಿಗೆ ಸಿಕ್ಕಿದ್ದು ಇವರು...

    ಪುತ್ಥಳಿ ವಿಶೇಷತೆ ಏನು?
    ಶಂಕರಾಚಾರ್ಯರ ಪುತ್ಥಳಿ 12 ಅಡಿ ಎತ್ತರ, 35 ಟನ್‌ ತೂಕವಿದೆ. ಕುಳಿತಿರುವ ಭಂಗಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಹೆಗ್ಗಡದೇವನಕೋಟೆಯಿಂದ ತರಲಾದ 120 ಟನ್‌ನ ಕೃಷ್ಣಶಿಲೆಯನ್ನು ಈ ಪುತ್ಥಳಿ ನಿರ್ಮಿಸಲು ಬಳಸಲಾಗಿದೆ. ಪುತ್ಥಳಿಗೆ ಹೊಳಪು ಬರಲು ತೆಂಗಿನಕಾಯಿಯ ನೀರಿನಿಂದ ಪಾಲಿಶ್‌ ಮಾಡಲಾಗಿದೆ.ಈ ಶಿಲೆಯ ವಿಶೇಷತೆ ಏನೆಂದರೆ, ಇದು ಮಳೆ, ಗಾಳಿ, ಬಿಸಿಲು ಹಾಗೂ ಕಠಿಣ ಹವಾಮಾನವನ್ನು ಕೂಡ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದೆ.

    ಮೈಸೂರಿನಲ್ಲಿ 9 ತಿಂಗಳ ಶ್ರಮದ ಬಳಿಕ ಪುತ್ಥಳಿಯನ್ನು ಕೆತ್ತಲಾಗಿತ್ತು. ಬಳಿಕ ಮೈಸೂರಿನಿಂದ ಚಮೋಲಿ ಏರ್‌ಬೇಸ್‌ವರೆಗೆ ರಸ್ತೆಯ ಮೂಲಕ ಸಾಗಿಸಲಾಯಿತು. ಅಲ್ಲಿಂದ ಕೇದಾರನಾಥದಲ್ಲಿರುವ ಸಮಾಧಿ ಸ್ಥಳಕ್ಕೆ ಭಾರತೀಯ ವಾಯುಪಡೆ ವಿಮಾನದ ಮೂಲಕ ಸಾಗಿಸಲಾಗಿದೆ ಎಂದು ಮೂಲಗಳು ಹೇಳಿವೆ.

    LIVE: ಕೇದಾರನಾಥದಲ್ಲಿ ಪ್ರಧಾನಿ ಮೋದಿ: 180 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts