More

    ಕೋಮುವಾದಿ ಚಟುವಟಿಕೆ ವಿರುದ್ಧ ಕ್ರಮಕ್ಕೆ ಆಗ್ರಹ

    ಚಿತ್ರದುರ್ಗ: ವೀರವನಿತೆ ಒನಕೆ ಓಬವ್ವ ಪುತ್ಥಳಿ ಮುಂಭಾಗ ಮತ್ತೊಂದು ಪುತ್ಥಳಿ ನಿರ್ಮಿಸಲು ಪ್ರಯತ್ನಿಸಿ, ಕೋಮು ಸೌಹಾರ್ದ ಹಾಳು ಮಾಡಲು ಮುಂದಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಛಲವಾದಿ ಮಹಾಸಭಾ, ಒನಕೆ ಓಬವ್ವ ಸಂರಕ್ಷಣಾ ಸಮಿತಿ, ಕರುನಾಡ ವಿಜಯಸೇನೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ವಿಶ್ವ ಗುರು ಜಗಜ್ಯೋತಿ ಬಸವೇಶ್ವರರ ಕುರಿತು ಅಪಾರ ಗೌರವವಿದ್ದು, ನಾವು ಕೂಡ ಅನುಯಾಯಿಗಳು. ಅವರ ಪ್ರತಿಮೆ ನಿರ್ಮಾಣ, ಹೆಸರನ್ನು ವೃತ್ತವೊಂದಕ್ಕೆ ಇಡಲು ಅಭ್ಯಂತವಿಲ್ಲ. ಆದರೆ, ಓಬವ್ವ ಪುತ್ಥಳಿಯನ್ನು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ನಿರ್ಮಿಸಲಾಗಿದೆ. ಆದರೂ ಈಚೆಗೆ ಮುಂಭಾಗವೇ ಬಸವಣ್ಣ ಪ್ರತಿಮೆ ಇಟ್ಟಿರುವ ಘಟನೆ, ಸಮುದಾಯಗಳ ಮಧ್ಯೆ ಸಾಮರಸ್ಯ ಕದಡುವ ಪ್ರಯತ್ನವಾಗಿದೆ. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

    ಕರುನಾಡ ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಓಬವ್ವಳ ಹೆಸರು ಅಜರಾಮರ. ವೀರನಾರಿಗೆ ಅಪಮಾನಿಸುವ ಕೃತ್ಯ ಯಾರಿಗೂ ಶೋಭೆ ತರುವಂತದಲ್ಲ. ತಪ್ಪು ಯಾರಿಂದಲೇ ನಡೆದರೂ ಕೂಡಲೇ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಕೋರಿದರು.

    ಛಲವಾದಿ ಮಹಾಸಭಾದ ಅಧ್ಯಕ್ಷ ಶೇಷಣ್ಣ, ಒನಕೆ ಓಬವ್ವ ಸಂರಕ್ಷಣಾ ಸಮಿತಿ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ, ವಿಜಯಸೇನೆ ಮಹಿಳಾ ಅಧ್ಯಕ್ಷೆ ವೀಣಾ ಗೌರಣ್ಣ, ಮುಖಂಡರಾದ ಗೋಪಿನಾಥ್, ಸುವರ್ಣಾ ರಾಜಶೇಖರ್, ಅವಿನಾಶ್, ರತ್ನಮ್ಮ, ಬಿ.ಟಿ.ಜಗದೀಶ್, ಅಖಿಲೇಶ್, ರಾಮಕೃಷ್ಣ, ಶ್ರೀನಿವಾಸ್, ಪ್ರಸನ್ನ, ದೇವರಾಜ್, ರಾಜಣ್ಣ, ಸುರೇಶ್, ಓಂಕಾರಮೂರ್ತಿ, ರವೀಂದ್ರ, ನವೀನ್, ನರಸಿಂಹಮೂರ್ತಿ, ಹನುಮಂತಪ್ಪ, ಹೇಮಂತಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts