More

    LIVE: ಕೇದಾರನಾಥದಲ್ಲಿ ಪ್ರಧಾನಿ ಮೋದಿ: 180 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

    ರುದ್ರಪ್ರಯಾಗ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ. ಶ್ರೀ ಆದಿ ಶಂಕರಾಚಾರ್ಯ ಸಮಾಧಿ ಉದ್ಘಾಟನೆ ಮತ್ತು ಆದಿ ಶಂಕರಾಚಾರ್ಯದ ಮೂರ್ತಿ ಅನಾವರಣಗೊಳಿಸಲಿದ್ದಾರೆ.
    ಇದಾಗಲೇ ಬಾಬಾ ಕೇದಾರನಾಥನಿಗೆ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿಯವರು, ಇದೀಗ 12 ಅಡಿ ಎತ್ತರದ ಮತ್ತು 35 ಟನ್ ತೂಕದ ಆದಿ ಗುರು ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಇದರೊಂದಿಗೆ 400 ಕೋಟಿ ರೂ.ಗೂ ಅಧಿಕ ಮೊತ್ತದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

    2013ರಲ್ಲಿ ಉತ್ತರಖಂಡದಲ್ಲಿ ಸಂಭವಿಸಿದ ಮಹಾ ಪ್ರವಾಹಕ್ಕೆ ಆದಿ ಶಂಕಾರಾಚಾರ್ಯ ಸಮಾಧಿ ಸ್ಥಳದಲ್ಲಿದ್ದ ಪುತ್ಥಳಿ ನಾಶವಾಗಿತ್ತು. ಈ ಪುತ್ಥಳಿಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಈ ಪುತ್ಥಳಿಯನ್ನು ಮೋದಿ ಅನಾವರಣ ಮಾಡಲಿದ್ದಾರೆ. ಇದರ ಜತೆಗೆ 180 ಕೋಟಿ ರೂಪಾಯಿ ವೆಚ್ಚದ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೂಡ ಪ್ರಧಾನಿ ಉದ್ಘಾಟಿಸಲಿದ್ದಾರೆ. ಕೇದಾರನಾಥ ಭೇಟಿಯಲ್ಲಿ ಸಂಘಮ್ ಘಾಟ್ ಅಭಿವೃದ್ಧಿ, ಪ್ರಥಮ ಚಿಕಿತ್ಸಾ ಹಾಗೂ ಪ್ರವಾಸಿ ಸೌಲಭ್ಯ ಕೇಂದ್ರ, ಎರಡು ಅಥಿಥಿ ಗೃಹ, ಆಸ್ಪತ್ರೆ, ನಾಗರೀಕ ಸೌಕರ್ಯ ಕಟ್ಟಡಗಳು ಸೇರಿವೆ.

    ಪ್ರವಾಹ ತಡೆಯಲು ನಿರ್ಮಿಸಿರುವ ಸರಸ್ವತಿ ಅಷ್ಠಪಥ ತಡೆಗೋಡೆ ಹಾಗೂ ಘಾಟ್ಸ್, ಮಂದಾಕಿನಿ ಅಷ್ಟಪಥ ತಡೆಗೋಡೆ, ಪುರೋಹಿತರ ಮನೆ, ಮಂದಾಕಿನಿ ನದಿಯ ಗರುಡ ಚಟ್ಟಿ ಸೇತುವೆ ಸೇರಿದಂತೆ ಪೂರ್ಣಗೊಂಡಿರುವ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಕೂಡ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

    ಇದರ ನೇರ ಪ್ರಸಾರ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts