ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲು ಹಂಚಿನಾಳ ಶ್ರಮ : ಬಿರಾದಾರ ಅನಿಸಿಕೆ

IMG-20230819-WA0056
Published on

ಆಳಂದ ಬಿಇಓ ವರ್ಗಾವಣೆಗೊಂಡ ಪ್ರಯುಕ್ತ ಸತ್ಕಾರ | ಬಸವೇಸ್ವರ ಸಮಾಜ ಸೇವಾ ಬಳಗ ಆಯೋಜನೆ

ಕಲಬುರಗಿ: ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೋಮಶೇಖರ ಎಸ್.ಹಂಚಿನಾಳ ಅವರು ಕೆಲವೇ ತಿಂಗಳುಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಆದರೆ ಅವರು ಒಂದು ನಿಮಿಷ ಕೂಡಾ ಸಮಯ ವ್ಯರ್ಥ ಮಾಡದೆ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಕ, ವಿದ್ಯಾರ್ಥಿ ಸ್ನೇಹಿಯಾಹಿ ತಾಲೂಕಿನಲ್ಲಿ ಉತ್ತಮವಾದ ಶೈಕ್ಷಣಿಕ ವಾತಾವರಣೆ ನಿರ್ಮಾಣ ಮಾಡಲು ಶ್ರಮಿಸಿದ್ದಾರೆ. ಶಿಕ್ಷಕರಿಗೆ ಪ್ರೇರಣೆ, ಒಳ್ಳೆಯ ಮಾರ್ಗದರ್ಶನ ನೀಡುತ್ತಿದ್ದರು ಎಂದು ಕ.ರಾ.ಪ್ರಾ.ಶಾ.ಶಿ.ಸಂಘದ ತಾಲೂಕಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಹೇಳಿದರು.
         ಆಳಂದನಿAದ ಇಲ್ಲಿನ ಉತ್ತರ ವಲಯಕ್ಕೆ ವರ್ಗಾವಣೆ ಹೊಂದಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚಿನಾಳ ಅವರಿಗೆ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಸಂಜೆ ಏರ್ಪಡಿಸಲಾಗಿದ್ದ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಸತ್ಕರಿಸಿ ಅವರು ಮಾತನಾಡಿದರು.
       ಸತ್ಕಾರ ಸ್ವೀಕರಿಸಿ ಮಾತನಾಡಿದ ವರ್ಗಾವಣೆಗೊಂಡಿರುವ ಬಿಇಓ ಸೋಮಶೇಖರ ಎಸ್.ಹಂಚಿನಾಳ, ತಾಲೂಕಿನ ಶಿಕ್ಷಕರು, ವಿದ್ಯಾರ್ಥಿಗಳು ಪ್ರತಿಭಾವಂತರಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಪ್ರೋತ್ಸಾಹಿಸಬೇಕು. ಇಲ್ಲಿನ ಜನತೆ ಕೂಡಾ ಉತ್ತಮವಾಗಿ ಸೇವೆ ಸಲ್ಲಿಸುವವರಿಗೆ ಸಹಕಾರ ನೀಡುತ್ತಾರೆ. ಅದು ಮತ್ತಷ್ಟು ಹೆಚ್ಚಿನ ಸೇವೆ ಸಲ್ಲಿಸಲು ಪ್ರೋತ್ಸಾಹ ದೊರೆಯುತ್ತದೆ. ವಿದ್ಯಾರ್ಥಿಗಳಲ್ಲಿ ದೇವರನ್ನು ಕಾಣುವ ಪ್ರವೃತ್ತಿ ಶಿಕ್ಷಕರದಾಗಿರಬೇಕು. ಪರಿಣಾಮಕಾರಿ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಶಿಕ್ಷಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಕ.ರಾ.ಪ್ರಾ.ಶಾ.ಶಿ.ಸಂಘ ರಾಜ್ಯ ಉಪಾಧ್ಯಕ್ಷ ವೇದಮೂರ್ತಿ ನೀಲಕಂಠಯ್ಯ ಹಿರೇಮಠ, ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಪರಮೇಶ್ವರ ಬಿ.ದೇಸಾಯಿ, ದೇವೇಂದ್ರಪ್ಪ ಗಣಮುಖಿ, ಇಸಿಓ ಲಕ್ಷಿö್ಮÃಕಾಂತ ಮೇತ್ರೆ, ಶಿಕ್ಷಕರಾದ ಮಹಾಂತೇಶ ಬಿ.ಬಿರಾದಾರ, ಅರುಣಕುಮಾರ ಬಿದರಿ ಸೇರಿದಂತೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net