

ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ಹಮ್ಮಿಕೊಂಡ ದ್ವಿತೀಯ ಹಂತದ ಅಕ್ಷತಾ ಅಭಿಯಾನಕ್ಕೆ ದೀಪ ಪ್ರಜ್ವಲಿಸಿ, ಕಿಟ್ ವಿತರಿಸುವ ಮೂಲಕ ಗಿರಿಪುರ ಶ್ರೀ ಶಾಸ್ತಾರ ಭಜನಾ ಮಂದಿರ ಅಧ್ಯಕ್ಷ ಬಿ.ವಿ.ಕುಂಜತ್ತಾಯ ಚಾಲನೆ ನೀಡಿದರು.
ಈ ಊರಿನ ಬಾಗಿಲಿನಂತಿರುವ ಶ್ರೀಶಾಸ್ತಾರ ಸನ್ನಿಧಿಯಿಂದ ಮಹಾ ಅಭಿಯಾನ ಆರಂಭಿಸಿರುವುದು ಸೂಕ್ತವಾಗಿದೆ. ನಾಡಿನ ಎಲ್ಲ ಜನರ ಸಹಕಾರ ದೊರೆಯಲೆಂದು ಬಿ.ವಿ.ಕುಂಜತ್ತಾಯ ಹಾರೈಸಿದರು.
ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಡಾ.ವೈ.ವಿ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಏಕ ಕಾಲದಲ್ಲಿ ಹಲವು ಕೇಂದ್ರಗಳಲ್ಲಿ ವಿತರಣೆಯಾಗುವ ಮನವಿ ಪತ್ರ, ಶಿವಾರ್ಪಣೆ ಯೋಜನೆ ವಿವರ ನೀಡಿ ತಂಡಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳಾದ ಬಾಲಕೃಷ್ಣ ಕೆ.ಕೆ., ಗಣರಾಜ ಕಡೆಕಲ್ಲು, ವೈ.ವಿ.ಸದಾಶಿವ ಮೈಸೂರು, ಡಾ.ಪ್ರಕಾಶ್ ವೈ.ಎಚ್., ಗೌರಿ ಕೆ.ಎಸ್., ಡಾ.ಅನ್ನಪೂರ್ಣೇಶ್ವರಿ, ಊರ ಪ್ರಮುಖರಾದ ಮಹಾಲಿಂಗೇಶ್ವರ ಕುಳೂರು, ಅಪ್ಪಕುಞಿ ಮಣಿಯಾಣಿ, ಮಾಸ್ತರ್ ಕುಞಿರಾಮ ಮಣಿಯಾಣಿ, ವೈ.ಬಿ.ರವಿ, ರಾಮಣ್ಣ ಬಾಳೆಗದ್ದೆ, ಪ್ರಭಾಕರ ಬೀಜದಕಟ್ಟೆ, ಎಚ್.ಶ್ರೀಕೃಷ್ಣ ಭಟ್ ಉಪಸ್ಥಿತರಿದ್ದರು.
ಸಂಚಾಲಕ ಚಂದ್ರಶೇಖರ ಏತಡ್ಕ ನಿರೂಪಿಸಿದರು. ವಿವಿಧ ತಂಡಗಳು ಏಕಕಾಲದಲ್ಲಿ ಪೆರ್ವತ್ತೋಡಿ, ಕುಳೂರು, ಬೆಳೆರಿ, ಪನೆಯಾಲ ಭಾಗದ ಭಕ್ತರ ಮನೆಗಳ ಸಂಪರ್ಕಕ್ಕೆ ತೆರಳಿದರು. ಒಂದೇ ದಿನದಲ್ಲಿ ನೂರಕ್ಕಿಂತ ಅಧಿಕ ಮನೆಗಳ ಸಂಪರ್ಕ ಮಾಡಲಾಯಿತು. ವಿವಿಧ ಸಂಘ-ಸಂಸ್ಥೆ, ಊರಿನ ಪ್ರಮುಖರು ಅಭಿಯಾನವನ್ನು ಸ್ವಾಗತಿಸಿ ಸಹಕಾರ ನೀಡಿದರು.