ಹಾವೇರಿ: ಜಿಲ್ಲೆಯಲ್ಲಿ ಆಯೋಜಿಸಲು ನಿರ್ಣಯಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವೆಂಬರ್ 11, 12ಹಾಗೂ 13ರಂದು ನಭೂತೋ ನಭವಿಷ್ಯತಿ ಎನ್ನುವ ರೀತಿಯಲ್ಲಿ ಆಯೋಜಿಸಲಾಗುವುದು. ಸರ್ಕಾರ ಈಗಾಗಲೇ 20 ಕೋಟಿ ರೂ. ಬಜೆಟ್ ಅನ್ನು ಸಮ್ಮೇಳನಕ್ಕೆ ಮೀಸಲಿರಿಸಿದೆ ಎಂದು ಸಚಿವ ಹೆಬ್ಬಾರ ತಿಳಿಸಿದರು.