ಸಮಾಜಕ್ಕೆ ಮಾನವೀಯ ಸಂದೇಶ ಸಾರುತ್ತಿದೆ ಅಕ್ಕಿಆಲೂರ

12 AKR 01
Published on

ಅಕ್ಕಿಆಲೂರ: ವಿಶ್ವದಲ್ಲೇ ರಕ್ತದಾನಕ್ಕೆ ಹೆಸರಾಗಿ, ರಕ್ತದಾನ ಕಾರ್ತಿಕೋತ್ಸವ ಆಚರಿಸುತ್ತಿರುವ ಅಕ್ಕಿಆಲೂರು ಸಮಾಜಕ್ಕೆ ಮಾನವೀಯ ಸಂದೇಶ ಸಾರುತ್ತಿದೆ ಎಂದು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


ಪಟ್ಟಣದಲ್ಲಿ ಗುರುವಾರ ಸ್ನೇಹಮೈತ್ರಿ ಬ್ಲಡ್ ಆರ್ವಿು ಸಂಸ್ಥೆಯಿಂದ ಆಯೋಜಿಸಿದ್ದ ರಕ್ತದಾನ ಕಾರ್ತಿಕೋತ್ಸವದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಮಾನವೀಯತೆ, ಧಯೆ ಮತ್ತು ನೈತಿಕತೆಯೇ ಧರ್ಮದ ಮೂಲ ಎಂಬ ಸಂದೇಶ ಹೊತ್ತು, ರಕ್ತದಾನದ ಮೂಲಕ ಪ್ರಸಿದ್ಧಿ ಪಡೆದ ಅಕ್ಕಿಆಲೂರು ಸಮುದಾಯದಲ್ಲಿ ಬೆಳಕು ಮೂಡಿಸುವ ಕಾರ್ಯಕ್ಕೆ ಮುಂದಾಗುತ್ತಿದೆ. ರಕ್ತದಾನ, ನೇತ್ರದಾನ, ದೇಹದಾನ ಇತ್ತೀಚೆಗೆ ಅಧಿಕ ಪ್ರಮಾಣದಲ್ಲಿ ನಡೆಯುತ್ತಿದೆ. ರಾಷ್ಟ್ರದ ಅನೇಕ ಪ್ರದೇಶ ಮತ್ತು ಊರುಗಳು ಒಂದೊಂದು ವಸ್ತು ಮತ್ತು ತಿನಿಸುಗಳಿಗೆ ಹೆಸರಾಗಿವೆ. ಆದರೆ, ಅಕ್ಕಿಆಲೂರ ರಕ್ತದಾನಕ್ಕೆ ಪ್ರಸಿದ್ಧಿ ಪಡೆದಿರುವುದು ಶ್ಲಾಘನೀಯ ಎಂದು ಹೇಳಿದರು.


ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ದೇವರ ಎದುರು ದೀಪ ಬೆಳಗಿ, ಆಧ್ಯಾತ್ಮಿಕವಾಗಿ ಮನಸು ಶಾಂತಗೊಳಿಸಿಕೊಳ್ಳುವ ಜನರು, ರಕ್ತದಾನ ಹೆಸರಿನಲ್ಲಿ ಮಾನವೀಯ ಕಾರ್ಯಕ್ಕೆ ಕೈಹಾಕಿರುವುದು ಸಂತಸದ ಸಂಗತಿ ಎಂದು ಹೇಳಿದರು.


ರಕ್ತದಾನದ ಮೂಲಕ ಹಲವು ಕುಟುಂಬಗಳ ಖುಷಿಗೆ ಮತ್ತು ಕಲ್ಯಾಣಕ್ಕೆ ಶ್ರಮಿಸುತ್ತಿರುವ ರಕ್ತ ಸೈನಿಕರು ಮತ್ತು ಜೀವದಾನ ಹಬ್ಬದ ಆಯೋಜಕರಿಂದ ಗೌರವಾರ್ಥ ದೀಪೊತ್ಸವ ನಡೆಯಿತು.


64 ಬಾರಿ ರಕ್ತದಾನ ಮಾಡಿದ ಸಂತೋಷ ಬೆನಕವಾರಿ, 29 ಬಾರಿ ರಕ್ತದಾನ ಮಾಡಿದ ವಿನಾಯಕ ಚಿನ್ನೂರ, 28 ಬಾರಿ ರಕ್ತದಾನ ಮಾಡಿದ ಮಂಜುನಾಥ, ಎನ್, ಡಾ ಬಸವರಾಜ್ ತಳವಾರ, ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ದಾವಣಗೆರೆಯ ಡಾ ಸುರೇಶ್ ಹನಗವಾಡಿ, ಡಾ ಮೀರಾ ಹನಗವಾಡಿ, ನವೀನ ಹಾವಳಿ, ನೀಲಮ್ಮ ಮೂರಮಟ್ಟಿ, ನವೀನ ಮದರಕಲ, ಚಂದ್ರು ಈಳಿಗೇರ, ಮನೋಹರ ಗೊಂದಿ ಚನ್ನವೀರಪ್ಪ ಬೆಲ್ಲದ, ಅಕ್ಕನ ಬಳಗದ ಸದಸ್ಯೆಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net