

ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ (ಅಭಾಸಾಪ) ನೂತನ ರಾಜ್ಯಾಧ್ಯಕ್ಷರಾಗಿ ಸಾಹಿತಿ ಎಸ್. ಜಿ. ಕೋಟಿ ನೇಮಕಗೊಂಡಿದ್ದಾರೆ.
ದಾವಣಗೆರೆಯಲ್ಲಿ ನಡೆದ ಅಭಾಸಾಪ ರಾಜ್ಯ ಅಧಿವೇಶನದಲ್ಲಿ ಪರಿಷತ್ತಿನ ಪದಾಧಿಕಾರಿಗಳ ಹೆಸರು ಘೋಷಣೆ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ಸಾಹಿತಿ ರಮೇಶ ಭಟ್ ಬೆಳಗೋಡು ಹಾಗೂ ಕವಯಿತ್ರಿ ರತ್ನಾ ಬಡವನಹಳ್ಳಿ, ಗೌರವ ಸಲಹೆಗಾರರಾಗಿ ಪ್ರೊ. ಪ್ರೇಮಶೇಖರ ಹಾಗೂ ಡಾ. ನಾ. ಮೊಗಸಾಲೆ ಕಾಂತಾವರ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ, ಖಜಾಂಚಿ, ಪ್ರಕಾರ ಪ್ರಮುಖರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ತಿಳಿಸಿದ್ದಾರೆ.