

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ದೇಗುಲದಲ್ಲಿ ನಡೆದ ಅಖಂಡ ಭಜನೋತ್ಸವ ಗುರುವಾರ ಮುಂಜಾನೆ ಸಂಪನ್ನಗೊಂಡಿತು. ಬುಧವಾರ ಸೂರ್ಯೋದಯದಿಂದ ಗುರುವಾರ ಸೂರ್ಯೋದಯದ ತನಕ ಭಜನೆ ನೆರವೇರಿತು. ಗುರುವಾರ ಮುಂಜಾನೆ ಸ್ಥಳೀಯ ಭಜಕರ ತಂಡದ ಸದಸ್ಯರು ಅಂತಿಮವಾಗಿ ಭಜನಾ ಸೇವೆ ನೆರವೇರಿಸಿದರು. ನಿವೃತ್ತ ಮುಖ್ಯಗುರು ಕೆ.ಯಶವಂತ ರೈ ಭಜನೋತ್ಸವಕ್ಕೆ ಮಂಗಳ ಹಾಡಿದರು.
ಭಜನೆಯಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರರ ವೃಂದ, ಸುಬ್ರಹ್ಮಣ್ಯ ಶ್ರೀ ವಿದ್ಯಾಸಾಗರ ಭಜನಾ ಸಂಗಮ, ಸುಬ್ರಹ್ಮಣ್ಯ ಶ್ರೀವಲ್ಲಿ ಮಹಿಳಾ ಭಜನಾ ಮಂಡಳಿ, ಬಂಟ್ವಾಳ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ, ಬಲ್ಯ ಉವಾಮಹೇಶ್ವರಿ ಮಹಿಳಾ ಭಜನಾ ಮಂಡಳಿ, ಮೂಡುಬಿದಿರೆ ಅನುಪಮ ಶೆಣೈ ಬಳಗ, ಬೊಳ್ವಾರ್ ಗಾನಸಿರಿ ಕಲಾಕೇಂದ್ರ, ಪಂಜ ವನಿತಾ ಸವಾಜ, ಕಡಬ ಭಜನಾಮೃತ ಭಜನಾ ಮಂಡಳಿ, ಆರ್ಲಪದವು ಶ್ರೀ ಸಿಂಧೂರ ಮಹಿಳಾ ಭಜನಾ ಮಂಡಳಿ, ಮೆಟ್ಟಿನಡ್ಕ ನಂದನ ಕಲಾ ಕುಟುಂಬ, ಕುಕ್ಕೆಶ್ರೀ ಸುಬ್ರಹ್ಮಣ್ಯ ಮಹಿಳಾ ಕುಣಿತ ಭಜನಾ ತಂಡ, ಕಲಾವಿದ ಕೆ.ಯಜ್ಞೇಶ್ ಆಚಾರ್ ಮತ್ತು ಬಳಗ, ಬೆಳ್ಳಾರೆ ಸ್ನೇಹಾಂಜಲಿ ಮಕ್ಕಳ ಕುಣಿತ ಭಜನಾ ತಂಡ, ಕಾರ್ಲ ರಾವಾಂಜನೇಯ ಭಜನಾ ತಂಡ, ಕುಲ್ಕುಂದ ಶ್ರೀ ಬಸವೇಶ್ವರ ಮಕ್ಕಳ ಕುಣಿತ ಭಜನಾ ತಂಡ, ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ, ನೆಟ್ಟಣ ವ್ನಿೇಶ್ವರ ಭಜನಾ ಮಂಡಳಿ, ಸುಬ್ರಹ್ಮಣ್ಯ ಕುಕ್ಕೆಶ್ರೀ ಭಜನಾ ತಂಡ, ಸುಬ್ರಹ್ಮಣ್ಯ ರು ಬಿಜೂರು ಬಳಗ, ಸಿಗಂದೂರು ಸಿಗಂಧೇಶ್ವರಿ ಭಜನಾ ಮಂಡಳಿ, ಮರಕತ ಶ್ರೀ ದುರ್ಗಾ ಭಜನಾ ಮಂಡಳಿ, ಸುಬ್ರಹ್ಮಣ್ಯ ಸ್ಥಳೀಯ ಭಜಕರ ವೃಂದದಿಂದ ಸೇವೆ ನೆರವೇರಿತು. ಸೇವೆ ನೆರವೇರಿಸಿದ ತಂಡಗಳಿಗೆ ಶ್ರೀ ದೇವಳದಿಂದ ದೇವರ ಪ್ರಸಾದ ನೀಡಿ ಅನುಗ್ರಹ ಪತ್ರದೊಂದಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.