ಅಜೆಕಾರು ದೇವಳ ಏಕಾಹ ಭಜನಾ ಮಂಗಲೋತ್ಸವ

BHAJANE
Published on

ಹೆಬ್ರಿ: ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನ ವಿಷ್ಣುಮೂರ್ತಿ ಭಜನಾ ಮಂಡಳಿ 40ನೇ ವರ್ಷದ ಭಜನಾ ಮಂಗಲೋತ್ಸವ ಪ್ರಯುಕ್ತ ಏಕಾಹ ಭಜನಾ ಕಾರ್ಯಕ್ರಮ ಶನಿವಾರ ಸೂರ್ಯೋದಯದೊಂದಿಗೆ ಆರಂಭವಾಯಿತು.

ಕಾರ್ಕಳ ತಾಲೂಕಿನ 40 ಭಜನಾ ತಂಡಗಳಿಂದ ಭಜನಾ ಮೆರವಣಿಗೆ ನಡೆಯಿತು. ಅಜೆಕಾರು ರಾಮ ಮಂದಿರದಿಂದ ಆರಂಭವಾದ ಭಜನಾ ಮೆರವಣಿಗೆ ಸಾಗಿ ಬಂದು ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.

ಪ್ರಮುಖರಾದ ವಿಜಯ ಶೆಟ್ಟಿ ಅಜೆಕಾರು, ಪ್ರಶಾಂತ ಶೆಟ್ಟಿ ಕುಂಠಿನಿ, ಭೋಜ ಮಡಿವಾಳ, ಜನಾರ್ದನ ನಾಯಕ್, ಭಾಸ್ಕರ ಶೆಟ್ಟಿ, ಜಗದೀಶ್ ಶೆಟ್ಟಿ ಅಜೆಕಾರು, ನಂದಕುಮಾರ್ ಹೆಗ್ಡೆ, ಹರೀಶ್ ನಾಯಕ್, ತಾರಾನಾಥ ಪೂಜಾರಿ, ಸತೀಶ್ ಶೆಟ್ಟಿ, ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net