ಪ್ರಿಯಾಂಕ್ ರಾಜೀನಾಮೆ ಕೊಡುವ ಮಾತೇ ಇಲ್ಲ : ಖರ್ಗೆ ಬೆಂಬಲಕ್ಕೆ ನಿಂತ ಡಾ.ಅಜಯಸಿಂಗ್

Dr.Ajayasingh
Published on

ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಹೆಸರು ಪ್ರಸ್ತಾಪಿಸಿಲ್ಲ  : ಬಿಜೆಪಿಯವರ ಬೇಡಿಕೆ ಅರ್ಥವಿಲ್ಲದ್ದು

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಬೀದರ ಜಿಲ್ಲೆಯ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಮುಂದಿಟ್ಟುಕೊAಡು ಬಿಜೆಪಿ ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುತ್ತಿರುವುದು ಸಮಂಜಸವಲ್ಲ. ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಹೆಸರು ಪ್ರಸ್ತಾಪಿಸಿಲ್ಲ ಎಂಬುದು ಅರಿತುಕೊಳ್ಳಲಿ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರಾದ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಕೇಸರಿಪಡೆಗೆ ತಿರುಗೇಟು ನೀಡಿದ್ದಾರೆ.

ಹೀಗಾಗಿ ಯಾವ ಕಾರಣಕ್ಕೂ ಪ್ರಿಯಾಂಕ್ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಷ್ಟಕ್ಕೂ ಸಚಿವ ಖರ್ಗೆ ರಾಜೀನಾಮೆ ಯಾಕೆ ಕೊಡಬೇಕು ? ಎಂದು ಪ್ರಶ್ನಿಸಿದ್ದಾರೆ. ಪ್ರಕರಣವನ್ನು ಸಿಐಡಿ ತನಿಖೆಗೆ ಈಗಾಗಲೇ ವಹಿಸಿಕೊಡಲಾಗಿದೆ. ತನಿಖೆ ಹಂತದಲ್ಲಿರುವಾಗ ಇಲ್ಲದ್ದನ್ನು ಪ್ರಸ್ತಾಪಿಸಿ ಗೊಂದಲ ಮೂಡಿಸುವ ಪ್ರಯತ್ನ ನಿಲ್ಲಿಸಿ ಎಂದು ತಿಳಿಸಿದ್ದಾರೆ.

ಬಿಜೆಪಿಯ ಬೇಡಿಕೆ ಅರ್ಥವಿಲ್ಲದ್ದು. ಅವರು ರಾಜಿನಾಮೆ ಕೊಡುವುದಿಲ್ಲ. ಆತ್ಮಹತ್ಯೆ ಮಾಡಿಕೊಂಡ ಸಚಿನ್‌ಗೂ ಪ್ರೀಯಾಂಕ ಖರ್ಗೆ ಅವರಿಗೂ ಸಂಬAಧವೇ ಇಲ್ಲ. ಅವರ ಆಪ್ತರೆಂದು ಹೇಳಿ ಬಿಜೆಪಿ ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಶಾಸಕರು, ಸಚಿವರಿಗೆ ಎಲ್ಲರೂ ಆಪ್ತರೇ ಆಗಿರುತ್ತಾರೆ. ಹಾಗಂತ ಯಾವುದೋ ಪ್ರಕರಣದಲ್ಲಿ ಅವರ ಹೆಸರು ಎಳೆದು ತಂದು ರಾಜೀನಾಮೆ ಕೇಳೋದು ಸಮಂಜಸವೆ ಎಂದು ಅಜಯಸಿಂಗ್ ಪ್ರಶ್ನಿಸಿದ್ದಾರೆ.

ಇಡಿ ಕಾಂಗ್ರೆಸ್ ಪP್ಷÀ, ಹಿಂದುಳಿದ ವರ್ಗ ಪ್ರಿಯಾಂಕ ಬೆಂಬಲಕ್ಕಿದೆ. ರಾಜೀನಾಮೆ ಕೇಳುತ್ತಿರುವುದರ ಹಿಂದೆ ರಾಜಕೀಯ ಪಿತೂರಿ ಅಡಗಿದೆ. ನಾವು ನುಡಿದಂತೆ ನಡೆಯುತ್ತಿz್ದೆÃವೆ.ಪಂಚ ಗ್ಯಾರಂಟಿ ಜಾರಿಗೆ ತಂದಿz್ದÉÃವೆ. ಜೊತೆಗೆ ಅಭಿವೃದ್ಧಿ ಕೆಲಸಗಳು ನಿರಾತಂಕವಾಗಿ ಮಡೆದಿವೆ. ಇದೆಲ್ಲವನ್ನು ಕಂಡು ಬಿಜೆಪಿ ಹೊಟ್ಟೆಕಿಚ್ಚು ಆಗಿದೆ. ಹೀಗಾಗಿ ಅವರಿಗೆ ಏನಾದರೂ ಮಾಡಿ ಗೊಂದಲ ಹುಟ್ಟು ಹಾಕಬೇಕೆಂದು ಇಲ್ಲದ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬಿಜೆಪಿಯ ಅರ್ಥ ರಹಿತ ಆಗ್ರಹಗಳಿಗೆ ಜನ ಬೆಂಬಲವೂ ಇಲ್ಲ. ಸಂಬAಧವಿಲ್ಲದ ಸಂಗತಿಗಳನ್ನೇ ಮುಂದಿಟ್ಟುಕೊAಡು ಖರ್ಗೆ ರಾಜೀನಾಮೆ ಕೇಳುತ್ತಿರುವುದು ನೋಡಿದಾಗ ಅವರನ್ನು ಟಾರ್ಗೇಟ್ ಮಾಡಿ ರಾಜಕೀಯ ಮಾಡುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಇದು ಜನರಿಗೂ ಗೊತ್ತಾಗಿದೆ ಎಂದು ಅಜಯಸಿಂಗ್ ಹೇಳಿದ್ದಾರೆ.

ಬಿಜೆಪಿಯವರು ಮಾತೆತ್ತಿದರೆ ಅವರಿವರ ರಾಜೀನಾಮೆ ಕೇಳಿದರೆ ಕೊಡಲಿಕ್ಕೇನು ಮಕ್ಕಳಾಟವೆ? ಬಿಜೆಪಿ ಮುಖಂಡರು ಇಂತಹ ಆಗ್ರಹ ಮಾಡುವ ಮುನ್ನ ಸರಿಯಾಗಿ ಯೋಚಿಸಿ ಹೇಳಿಕೆ ನೀಡಬೇಕು ಎಂದು ಡಾ. ಅಜಯ್ ಸಿಂಗ್ ಕಿವಿಮಾತು ಹೇಳಿz್ದÁರೆ.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net