

ಅಪ್ಪನ ಹಾದಿಯಲ್ಲಿ ಅಜಯಸಿಂಗ್ | ಕೆಕೆಆರ್‌ಡಿಬಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದರ್ಮಸಿಂಗ್ ಪುತ್ರ
ಬಾಬುರಾವ ಯಡ್ರಾಮಿ ಕಲಬುರಗಿ
ಎಂಬತ್ತರ ದಶಕದಲ್ಲಿ ತಂದೆ ಅಧ್ಯಯನ ನಡೆಸಿ ಸಲ್ಲಿಸಿದ ವರದಿಯಂತೆ ಅಸ್ತಿತ್ವಕ್ಕೆ ಬಂದ ಮಂಡಳಿಗೆ, ನಂತರ ೨೦೧೩ರಲ್ಲಿ ಸಂವಿಧಾನದ ೩೭೧ (ಜೆ) ತಿದ್ದುಪಡಿಯಾದ ಬಳಿಕ ಹೊಸದಾಗಿ ರಚನೆಗೊಂಡ ಮಂಡಳಿಗೆ ಈಗ ಮಗ ಅಧ್ಯಕ್ಷರಾಗಿದ್ದಾರೆ. ಇದು ಕಾಕತಾಳಿಯ. ಈ ಮೂಲಕ ಅಪ್ಪ ಹಾಕಿದ ಆಲದ ಮರ ಎನ್ನುವ ಮಾತಿಗೆ ಹೊಸ ಅಭಿವೃದ್ಧಿಯ ಹೊಸ ಮುನ್ನುಡಿ ಬರೆಯುವ ಕಾಯಕ ಕಲ್ಯಾಣ ಕರ್ನಾಟಕದಲ್ಲಿ ಇನ್ಮುಂದೆ ಶುರುವಾಗಲಿದೆ.
ಅಜಯಸಿಂಗ್ ಅವರು ಇಂದು ನಗರದ ಅಭಿವೃದ್ಧಿ ಭವನದಲ್ಲಿ ಅಧಿಕಾರ ವಹಿಸಿಕೊಂಡರು. ಮಂಡಳಿ ಕಾರ್ಯದರ್ಶಿ ಅನಿರುದ್ದ ಶ್ರವಣ ಪಿ ಅವರು ಹೂಗುಚ್ಚ ನೀಡಿ ಶುಭ ಕೋರಿದರು. ಅವರೊಂದಿಗೆ ಮಂಡಳಿಯ ಹತ್ತು ಸದಸ್ಯರು ಅಧಿಕಾರ ವಹಿಸಿಕೊಂಡರು.
ಹಿಂದುಳಿದ ಪಟ್ಟಿ ಹೊತ್ತ ತಾಲೂಕುಗಳ ಅಭಿವೃದ್ಧಿ ಸವಾಲು
ಹೈದರಾಬಾದ ನಿಜಾಮರ ಆಡಳಿತಕ್ಕೊಳಪಟ್ಟಿದ್ದ ಈ ಭಾಗ ಸೇರಿದಂತೆ ರಾಜ್ಯದಲ್ಲಿ ಹಿಂದುಳಿರುವ ಕೆಲ ತಾಲೂಕುಗಳ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಸ್ಥಿತಿಯ ಕುರಿತು ಗೋಳು ತೋಡಿಸಿಕೊಳ್ಳುತ್ತಿರುವುದರಿಂದ ಯಾವ ರೀತಿ ಹಿಂದುಳಿಯುವಿಕೆ ಹೋಗಲಾಡಿಸಿ ಅಭಿವೃದ್ಧಿ ಮಾಡಬಹುದು ಎಂಬುದರ ಕುರಿತು ಅಧ್ಯಯನ ನಡೆಸಲು ೧೯೮೦ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಆರ್.ಗುಂಡುರಾ ವ ಅವರು ಜೇವರ್ಗಿ ಶಾಸಕರಾಗಿದ್ದ ಧರ್ಮಸಿಂಗ್ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚಿಸಿದ್ದರು. ಈಗ ಅದರ ಮುಂದುವರೆ ಸ್ವರೂಪವಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಈಗ ಅವರ ಪುತ್ರ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅಧ್ಯಕ್ಷರಾಗಿದ್ದಾರೆ.
ರಾಜ್ಯದ ನಾಯಕರ ಪ್ರೀತಿಗೆ ಪಾತ್ರರಾಗಿರುವ ಅಜಯಸಿಂಗ್, ತಂದೆಯ ಹಾದಿಯಲ್ಲಿಯೇ ತಾಳ್ಮೆಯೊಂದಿಗೆ ಸಾಗುವ ಮೂಲಕ ಅಜಾತಶತ್ರುವಾಗಿ ಹೊರಹೊಮ್ಮುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಅಜಯಸಿಂಗ್ ಹೆಗಲಿಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೊಳಿಸುವ ಮಹತ್ವದ ಹೊಣೆಗಾರಿಕೆಯನ್ನು ಹೊರಿಸಿದ್ದಾರೆ. ಈಗದನ್ನು ಸಮರ್ಥವಾಗಿ ಎಳೆದುಕೊಂಡು ಹೋಗುವ ಜವಾಬ್ದಾರಿ ಅವರದ್ದಾಗಿದೆ.
ಧರ್ಮಸಿಂಗ್ ಅವರು ಅಧ್ಯಯನ ವರದಿ ಸಲ್ಲಿಸಿದರು. ಆ ಹಿಂದುಳಿದ ಪ್ರದೇಶಗಳಿಗೆ ಒಂದಿಷ್ಟು ಅನುದಾನ ಹೆಚ್ಚಿಗೆ ನೀಡಲಾಯಿತು. ಅಷ್ಟೊತ್ತಿಗೆ ಸರ್ಕಾರ ಪತನಗೊಂಡಿದ್ದರಿAದ ಬಳಿಕ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರ್ಕಾರದಲ್ಲಿ ಸಿಎಂ ಆಗಿದ್ದ ರಾಮಕೃಷ್ಣ ಹೆಗಡೆ ಅವರು ಧರ್ಮಸಿಂಗ್ ವರದಿ ಅನುಷ್ಠಾನಗೊಳಿಸಲು ಆಸಕ್ತಿ ತೋರಿಸಲಿ.೧೯೮೯ರಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಈಗಿನಂತೆ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಕಲಬುರಗಿಯವರೆ ಆಗಿದ್ದ ವಿರೇಂದ್ರ ಪಾಟೀಲ್‌ರು ಸಿಎಂ ಆದರು. ಬಳಿಕ ರಾಜಕೀಯ ವಿಪ್ಲವಗಳಲ್ಲಿ ೧೯೯೨ರಲ್ಲಿ ಎಸ್.ಬಂಗಾರಪ್ಪ ಅವರು ಸಿಎಂ ಆದಾಗ ಎಚ್‌ಕೆಡಿಬಿ ಅಸ್ತಿತ್ವಕ್ಕೆ ತಂದರು. ವರದಿ ಸಲ್ಲಿಸಿದ ೧೨ ವರ್ಷಗಳ ಕಾಲ ಮಂಡಳಿ ಅನುಷ್ಠಾನಕ್ಕೆ ಬಂದಿತು. ಧರ್ಮಸಿಂಗ್ ವರದಿಯಂತೆ ಹೈದರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ (ಎಚ್‌ಕೆಡಿಬಿ) ಸೇರಿದಂತೆ ಮೂರು ಪ್ರದೇಶಗಳ ಅಭಿವೃದ್ಧಿ ಮಂಡಳಿಗಳು ಅಸ್ತಿತ್ವಕ್ಕೆ ಬಂದದ್ದು ವಿಶೇಷ.
ಧರ್ಮಸಿಂಗ್ ಅವರ ಆಪ್ತ ಎನ್.ಎಸ್.ಭೋಸರಾಜು ಅವರನ್ನು ಎಸ್.ಎಂ.ಕೃಷ್ಣ ಅವಧಿಯಲ್ಲಿ ಎಚ್‌ಕೆಡಿಬಿಗೆ ಅಧ್ಯಕ್ಷರಾಗಿ ನೇಮಿಸಿದರು. ಸ್ವಂತ ಕಟ್ಟಡ ನಿರ್ಮಿಸಿ ಉದ್ಘಾಟನೆಗೊಳ್ಳುವ ಹೊತ್ತಿಗೆ ಈ ಮಂಡಳಿ ಪ್ರವರ್ಧಮಾನಕ್ಕೆ ಬಂದಿತು. ಅಲ್ಲಿಂದ ೨೦೧೩ವರೆಗೆ ಎಚ್‌ಕೆಡಿಬಿಯಾಗಿಯೇ ಇತ್ತು. ಹಿಂದುಳಿದ ಹೈಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಹೋರಾಟವು ಮಾಜಿ ಸಚಿವ ವೈಜನಾಥ ಪಾಟೀಲ್ ನೇತೃತ್ವದಲ್ಲಿ ಹೋರಾಟ ತೀವ್ರಗೊಂಡಿತು. ಆಗ ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದರಾಗಿದ್ದ ಧರ್ಮಸಿಂಗ್ ಅವರ ಪ್ರಯತ್ನದ ಫಲವಾಗಿ ಸಂವಿಧಾನ ೩೭೧ ಜೆ ತಿದ್ದುಪಡಿಗೊಂಡಿತು. ಹೀಗಾಗಿ ಎಚ್‌ಕೆಡಿಬಿಯನ್ನು ಎಚ್‌ಕೆಆರ್‌ಡಿಬಿಯಾಗಿ ಹೆಸರಿಸಿ ಕಾರ್ಯರೂಪಕ್ಕೆ ತರಲಾಯಿತು. ನಂತರ ಬಿಜೆಪಿ ಸರ್ಕಾರವಿದ್ದಾಗ ಸಿಎಂ ಆಗಿದ್ದ ಯುಡಿಯೂರಪ್ಪನವರು ಮಂಡಳಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣಗೊಳಿಸಿದರು. ಒಟ್ಟಾರೆ ಹಿಂದುಳಿಯುವಿಕೆ ಹೋಗಲಾಡಿಸಲು ಅಸ್ತಿತ್ವಕ್ಕೆ ಪ್ರಥಮ ಸಲ ಧರ್ಮಸಿಂಗ್ ಶಿಫಾರಸ್ಸಿನಂತೆ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು, ಈಗ ಅವರ ಪುತ್ರ ಅಧ್ಯಕ್ಷರಾಗಿ ಸೋಮವಾರ ಪದಗ್ರಹ ಮಾಡಲಿದ್ದಾರೆ.
ಮಂಡಳಿಯ ಅದ್ಯಕ್ಷರಾಗಿದ್ದವರು
ಕೆಕೆಆರ್‌ಡಿಬಿಗೆ ಈ ಹಿಂದೆ ಸಚಿವರಾಗಿದ್ದ ಖಮರುಲ್ ಇಸ್ಲಾಂ, ಡಾ.ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ. ರಾಜಶೇಖರ ಪಾಟೀಲ, ಬಸವರಾಜ ರಾಯರೆಡ್ಡಿ ಮೊದಲಾದವರು ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅದಕ್ಕೂ ಮೊದಲು ನಾಗರಾಜ ಇಟಗಿ, ಭೋಸರಾಜು ಇತರರು ಅಧ್ಯಕ್ಷರಾಗಿದ್ದರು. ಆಗಷ್ಟ ೨೦೨೦ರಲ್ಲಿ ದತ್ತಾತ್ರೇಯ ಪಾಟೀಲ್ ರೇವೂರ ಅವರ ಬಳಿಕ ಈಗ ಅಧ್ಯಕ್ಷರಾಗಿ ಅಜಯಸಿಂಗ್ ನಿಯಕ್ತಿಗೊಂಡಿದ್ದಾರೆ.
ಮಂಡಳಿ ಈಗ ಪವರ್‌ಫುಲ್
ಕೆಕೆಆರ್‌ಡಿಬಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಶೇ.೨೬ರಿಂದ ಶೇ|೯೬ಕ್ಕೆ ಏರಿಸಲಾಗಿದೆ. ಹೀಗಾಗಿ ಮಂಡಳಿಯ ಅಧ್ಯಕ್ಷರು ಪವರ್‌ಫುಲ್ ಆಗಿರಲಿದ್ದಾರೆ. ಇದಿರಂದಾಗಿ ಮಂಡಳಿಯ ಪ್ರಮಖ ಕಾರ್ಯಯೋಜನೆಗಳಿಗೆ ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳುವುದು ಸೇರಿದಂತೆ ಸಚಿವರು, ಸರ್ಕಾರದ ಮಟ್ಟದಲ್ಲಿ ಅನೇಕ ಹಿರಿಯ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳಲು ಸಹಕಾರಿಯಾಗಲಿದೆ.
ಅಜಯಸಿಂಗ್ ಮುಂದೆ ಸವಾಲುಗಳ ಸಾಲು
ಮಂಡಳಿಯ ಅಧ್ಯಕ್ಷ ಸ್ಥಾನದ ಜತೆಗೆ ಹಲವು ಸವಾಲುಗಳು ಡಾ.ಅಜಯಸಿಂಗ್ ಅವರ ಮುಂದಿವೆ. ಇಡಿ ಕಲ್ಯಾಣ ಕರ್ನಾಟಕ ಭಾಗದ ೪೨ ಕ್ಷೇತ್ರಗಳ ಅಭಿವೃದ್ಧಿಗೆ ಯೋಜನೆ ರೂಪಿಸುವುದರ ಇನ್ನಿತರ ಮಹತ್ವದ ಕೆಲಸಗಳು ಮಾಡಬೇಕಾಗುತ್ತದೆ. ನನೆಗುದಿಗೆ ಬಿದ್ದಿರುವ ಅಂತಾರಾಷ್ಟಿçÃಯ ಮಟ್ಟದ ಕ್ರೀಡಾ ಸಮುಚ್ಛಯ, ಅಂತಾರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣ, ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಹಾಸ್ಟೇಲ್ ಕಟ್ಟಡ ಪೂರ್ಣಗೊಳಿಸುವುದು, ಕಕ ಭಾಗದ ಅಭಿವೃದ್ಧಿಗೆ ಹೊಸ ಸ್ಪರ್ಶ ನೀಡುವುದು ಸೇರಿದಂತೆ ಅನೇಕ ಸಾಲು ಸಾಲು ಸಮಸ್ಯೆಗಳಿವೆ.
====