ಏಮ್ಸ್‌ನಲ್ಲಿ ಡಿಎಂ ಪದವಿ ಪಡೆಯಲು ಅವಕಾಶ ಗಿಟ್ಟಿಸಿದ ಡಾ.ವಿವೇಕ್

pd
Published on

ರಾಮನಗರ: ಆಸಕ್ತಿ, ಶ್ರಮ ಇದ್ದರೆ ಉನ್ನತ ಸ್ಥಾನಕ್ಕೇರುವುದು ಅಸಾಧ್ಯವಲ್ಲ. ಇದು ಉನ್ನತ ಶಿಕ್ಷಣದ ಅವಕಾಶಗಳಿಸುವುದಕ್ಕೂ ಅನ್ವಯಿಸುತ್ತದೆ ಎಂಬುದನ್ನು ರಾಮನಗರದ ಡಾ.ವಿವೇಕ್ ಪಿ. ದಿನಕರ್ ನಿರೂಪಿಸಿದ್ದಾರೆ.

ಭಾರತದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಆಫ್ ಮೆಡಿಸಿನ್ (ಡಿಎಂ) ಪದವಿ ಪಡೆಯಲು ಅವಕಾಶ ಸಿಕ್ಕಿದೆ.

ಪೇನ್‌ಮೆಡಿಸಿನ್ (ನೋವು ನಿವಾರಣಾ ಚಿಕಿತ್ಸೆ) ಪದವಿಗೆ ಡಾ.ವಿವೇಕ್.ಪಿ.ದಿನಕರ್ ಆಯ್ಕೆಯಾಗಿದ್ದಾರೆ. ಅರಿವಳಿಕೆ ತಜ್ಞರಿಗೆ ಮಾತ್ರ ಈ ತರಬೇತಿ ಸೀಮಿತವಾಗಿದೆ ಎಂಬುದು ವಿಶೇಷ. ಏಮ್ಸ್‌ನಲ್ಲಿ ಈ ತರಬೇತಿಗೆ ಇರುವುದು ಒಂದೇ ಒಂದು ಸೀಟು. ಇಡೀ ಭಾರತದಲ್ಲಿ ಸುಮಾರು 1 ಸಾವಿರ ಮಂದಿ ಈ ತರಬೇತಿಗಾಗಿ ಪ್ರವೇಶ ಪರೀಕ್ಷೆ ಎದುರಿಸಿದ್ದರು. ಈ ಪೈಕಿ ರಾಮನಗರದ ಡಾ.ವಿವೇಕ್ ಪ್ರಥಮಸ್ಥಾನ ಪಡೆದು ತರಬೇತಿಗೆ ಆಯ್ಕೆಯಾಗಿದ್ದಾರೆ.

ಸೈನ್ಯದಲ್ಲಿ ಸೇವೆ: ಎಂಬಿಬಿಎಸ್, ಎಂಡಿ (ಅನೆಸ್ಥೇಷಿಯಾ-ಅರಿವಳಿಕೆ), ಡಿಎನ್‌ಬಿ, ಎಂಬಿಎ (ಆಸ್ಪತ್ರೆ ನಿರ್ವಹಣೆ) ಪದವಿ ಪಡೆದಿರುವ ಡಾ.ವಿವೇಕ್, ರಾಮನಗರದ ಡಾ.ದಿನಕರ್ ಮತ್ತು ರತ್ನಮಾಲ ದಂಪತಿಯ ಪುತ್ರ. ವೈದ್ಯ ಪದವಿ ಪಡೆದ ಭಾರತೀಯ ಸೈನ್ಯದಲ್ಲಿ ವೈದ್ಯರಾಗಿ 5 ವರ್ಷ ಸೇವೆ ಸಲ್ಲಿದ್ದಾರೆ. ಸದ್ಯ ಚನ್ನಪಟ್ಟಣ ಬಳಿಯ ಚಾಮುಂಡೇಶ್ವರಿ ವೈದ್ಯಕೀಯ ಸಂಸ್ಥೆಯಲ್ಲಿ ಸಹಾಯಕ ಪ್ರೊಫೆಸರ್ ಹುದ್ದೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net