

ಹಾಸನ: ಅತಿಥಿ ಉಪನ್ಯಾಸಕರನ್ನು ನೇಮಿಸದೆ ಪರೀಕ್ಷಾ ವೇಳಾಪಟ್ಟಿ ನೀಡಿರುವುದನ್ನು ಖಂಡಿಸಿ ನಗರದ ಸಾಲಗಾಮೆ ರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕಿ ಚೈತ್ರಾ ಮಾತನಾಡಿ, ಅತಿಥಿ ಉಪನ್ಯಾಸಕರಿಲ್ಲದೆ ಬಹುತೇಕ ವಿಷಯಗಳಿಗೆ ಸಂಬಂಧಿಸಿದಂತೆ ಒಂದು ತರಗತಿ ಕೂಡ ನಡೆದಿಲ್ಲ. ಆದರೆ, ಈಗ ಸೆಮಿಸ್ಟರ್ ವೇಳಾಪಟ್ಟಿ ಹಾಗೂ ಪರಿಕ್ಷಾ ಶುಲ್ಕದ ಸುತ್ತೋಲೆ ಹೊರಡಿಸಿರುವುದು ಖಂಡನೀಯ ಎಂದು ಹೇಳಿದರು. ಸರ್ಕಾರ ಶೀಘ್ರ ಗೊಂದಲ ನಿವಾರಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದರು.
ಅಭಿಷೇಕ್, ಶ್ಯಾಮಲಾ, ಜಯಂತ್, ಮನ್ವಿತ್, ಮದನ್, ಚಿದಾನಂದ, ಗುರುಕಿರಣ್, ಅಹರ್ನಿಶಿ ಇತರರಿದ್ದರು.