ಅನುದಾನಿತ ಶಾಲೆಗಳ ಮೇಲೆ ಪ್ರಹಾರ ಬೇಡ : ನಮೋಶಿ

Shashil Namoshi
Published on

ಸೌಲಭ್ಯ ನೀಡಿ ಎಂದು ನಮೋಶಿ | ಶಿಕ್ಷಣ ಇಲಾಖೆ ಸುತ್ತೋಲೆ ಹಿಂಪಡಿಯಲಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಎಸ್ಸೆಸ್ಸೆಲ್ಸಿ Àಲಿತಾಂಶ ಶೇ.೬೦ಕ್ಕಿಂತ ಕಡಿಮೆ ಬಂದ ಶಾಲೆ ಶಿಕ್ಷಕರಿಗೆ ಮುಂಬಡ್ತಿ ಇಲ್ಲ, ಅನುದಾನ ನೀಡಲ್ಲ ಸೇರಿ ಇತರ ಕ್ರಮ ಕೈಗೊಳ್ಳಲಾಗುವುದು ಎಂದು ಅನುದಾನಿತ ಪ್ರೌಢ ಶಾಲೆಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿರುವ ಸುತ್ತೋಲೆ ಹಿಂಪಡೆಯಬೇಕು, ಸೂಕ್ತ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಆಗ್ರಹಿಸಿದರು.

ಐದು ವರ್ಷದಲ್ಲಿ Àಲಿತಾಂಶ ಶೇ.೫೦ಕ್ಕಿಂತ ಕಡಿಮೆ ಆದಲ್ಲಿ ಆ ಶಾಲೆಗಳ ಅನುದಾನ ನಿಲ್ಲಿಸುವುದು, ಶಿಕ್ಷಕರಿಗೆ ಸಂಬಳ ನೀಡಲ್ಲ ಎನ್ನುವ ಸರ್ಕಾರವೂ ಮೊದಲು ರಾಜ್ಯದಲ್ಲಿ ಖಾಲಿ ಇರುವ ಸುಮಾರು ೨೯ ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು, ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಗೆ ಚಿಕ್ಕಿ, ಮೊಟ್ಟೆ, ಹಾಲು ನಿಯಂತ್ರಣಕ್ಕೆ ಹಚ್ಚಿದರೆ ಪಾಠ ಯಾವಾಗ ಮಾಡಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

Àಲಿತಾಂಶ ಕುಸಿತದ ಪರಾಮರ್ಶೆ ಮಾಡಬೇಕು, ಸರ್ಕಾರವೂ ಕೇವಲ ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯ ಆಗುತ್ತಿದೆ ಏಕೆ? ಬಿಸಿಯೂಟ, ಗಣತಿ ಸೇರಿ ಹಲವು ಜವಾಬ್ದಾರಿ ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ನಮ್ಮಲ್ಲಿ ಸರಿಯಾದ ಶಿಕ್ಷಕರಿಲ್ಲ, ಹಲವು ತೊಡಕುಗಳ ಮಧ್ಯೆ ಅನುದಾನಿತ ಶಾಲೆಗಳು ಶಿಕ್ಷಣ ನೀಡುತ್ತ ಬಂದಿವೆ ಎಂಬುದು ಸರ್ಕಾರ ಅರಿಯಬೇಕು ಎಂದರು.

ಸರ್ಕಾರಿ ಶಾಲೆಗಳಲ್ಲಿ ಶೇ.೩೦ ಶಿಕ್ಷಕರ ಹುದ್ದೆ ಖಾಲಿ ಇದ್ದು, ಒಳ ಮೀಸಲಾತಿ ಜಾರಿ ಆಗುವರೆಗೆ ನೇಮಕ ಬಾಕಿ ಇರಿಸಿಕೊಂಡಿದ್ದರಿAದ ಶಿಕ್ಷಕರ ನೇಮಕವಾಗುತ್ತಿಲ್ಲ. ಪ್ರಸ್ತುತ ಶಿಕ್ಷಕರ ಕಾರ್ಯಭಾರ ಒತ್ತಡ ಹೆಚ್ಚಾಗಿದೆ. ಶಿಕ್ಷಕರಿಗೆ ಹಲವು ಸಮಸ್ಯೆಗಳಿದ್ದು, ಎಲ್ಲವನ್ನು ಬಗೆಹರಿಸಿ ನಂತರ Àಲಿತಾಂಶ ಪಡೆಯಲು ಸಾಧ್ಯವಾಗಲಿದೆ ಎಂದರು.

ಇದೇ ಪರಿಸ್ಥಿತಿ ಮುಂದುವರಿದರೆ ಮತ್ತಷ್ಟು ಶಾಲೆಗಳು ಮುಚ್ಚುತ್ತವೆ. ಶುಚಿತ್ವ ಸಿಬ್ಬಂದಿಯನ್ನು ನೇಮಿಸಬೇಕು, ಅನ್ಯ ಕೆಲಸಗಳಿಂದ ಶಿಕ್ಷಕರಿಗೆ ಮುಕ್ತಿ ನೀಡಬೇಕು, ಲೋಪಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಶಿಕ್ಷಕರ ಸಂಘಟನೆಗಳ ಜತೆ ಚರ್ಚಿಸಿ, ಬೀದಿಗೆ ಇಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡರಾದ ಅಣವೀರ ಪಾಟೀಲ್, ಶರಣು ಸಜ್ಜನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net