

ಕಡಬ: ತಾಲೂಕಿನ ಕುಂತೂರು ಗ್ರಾಮದ ಎರ್ಮಾಳ ಎಂಬಲ್ಲಿ ತೀರಾ ಅನಾರೋಗ್ಯದಲ್ಲಿರುವ ಬಡ ಕುಟುಂಬವೊಂದಕ್ಕೆ ನಂದಗೋಕುಲ ಟ್ರಸ್ಟ್ ಫಂಡ್ ವತಿಯಿಂದ ವಿವಿಧ ಸಹಾಯ ಹಸ್ತಾಂತರಿಸಲಾಯಿತು.
61 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಛಾವಣಿ ವ್ಯವಸ್ಥೆ, ಸ್ನಾನದ ಮನೆ, ಶೌಚಗೃಹ ವ್ಯವಸ್ಥೆ ಇತ್ತೀಚೆಗೆ ಹಸ್ತಾಂತರಿಸಲಾಯಿತು. ದಿನಸಿ ಸಾಮಗ್ರಿಗಳನ್ನು ನೀಡಲಾಯಿತು.
ನಂದಗೋಕುಲ ಟ್ರಸ್ಟ್ ಫಂಡ್ ಸದಸ್ಯರಾದ ಮೋಹನ್ ಕೆ.ಪಿ, ನಾಗೇಶ್, ರವಿರಾಜ್, ನವೀನ್ ಕೆ.ಪಿ, ಪ್ರಮೋದ್, ಪವನ್, ಮೋಹನ್, ಪ್ರಸಾದ್ ಅರುಣ್, ನಿತಿನ್, ಅಮೃತ್, ಕಾರ್ತಿಕ್ ಎಂ, ಹರಿಪ್ರಸಾದ್, ಸೃಜನ್, ಶೃತಿ, ಕಾವ್ಯಾ, ಲಿಖಿತಾ, ರಕ್ಷಾ, ರೂಪಾ, ಸೌಮ್ಯಾ, ಪ್ರಮೀಳಾ ಮತ್ತು ವಾಗ್ಮಿ ಸುರೇಶ್ ಪಡಿಪಂಡ ಉಪಸ್ಥಿತರಿದ್ದರು.