

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕೃತಕ ಬುದ್ಧಿಮತ್ತೆಯ ಮೇಲಿನ ಅತಿಯಾದ ಅವಲಂಬನೆ ಸೃಜನಶೀಲತೆಯನ್ನು ನಾಶಪಡಿಸುತ್ತದೆ ಎಂದು ತಿರುವನಂತಪುರ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ.ಎಸ್.ಉಣ್ಣಿಕೃಷ್ಣನ್ ನಾಯರ್ ಹೇಳಿದರು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‌ನಲ್ಲಿ 8ನೇ ಘಟಿಕೋತ್ಸವದಲಿ ಪದವಿಪ್ರದಾನ ನಡೆಸಿ ಮಾತನಾಡಿದರು.
ಪ್ರಭಾರ ಉಪಕುಲಪತಿ ಪ್ರೊ.ವಿನ್ಸೆಂಟ್ ಮ್ಯಾಥ್ಯೂ, ರಿಜಿಸ್ಟ್ರಾರ್ ಡಾ.ಎಂ.ಮುರಳೀಧರನ್ ನಂಬಿಯಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್.ಜಯಪ್ರಕಾಶ್, ವಿಶ್ವವಿದ್ಯಾಲಯದ ಕೋರ್ಟ್ ಸದಸ್ಯರು, ಕಾರ್ಯಕಾರಿ ಮಂಡಳಿ ಸದಸ್ಯರು, ಶೈಕ್ಷಣಿಕ ಕೌನ್ಸಿಲ್ ಸದಸ್ಯರು ಇದ್ದರು.
851 ಮಂದಿಗೆ ಪದವಿ ಪ್ರದಾನ
851 ಮಂದಿಗೆ ಪದವಿ ಪ್ರದಾನ ಮಾಡಲಾಯಿತು. ನೇರವಾಗಿ ಭಾಗವಹಿಸಲು 664 ಮಂದಿ ನೋಂದಣಿ ಮಾಡಿಕೊಂಡಿದ್ದು, 41 ಜನರಿಗೆ ಪದವಿ, 727 ಸ್ನಾತಕೋತ್ತರ ಪದವಿ, 58 ಪಿಎಚ್‌ಡಿ ಪದವಿ ಮತ್ತು 25 ಪಿಜಿ ಡಿಪ್ಲೊಮಾ ಪದವಿಗಳನ್ನು ನೀಡಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಎಲ್ಫಾ ನಶೀದಾ (ಭಾಷಾಶಾಸ್ತ್ರ), ಅಶ್ವತಿ ಎ.ಪಿ. (ಗಣಿತ), ಅಂಜನಾ ಪಿ.ಎಸ್.(ಮ್ಯಾನೇಜ್‌ಮೆಂಟ್ ಸ್ಟಡೀಸ್), ಅನಿಲ ವಿ.(ವಾಣಿಜ್ಯ ಮತ್ತು ಅಂತರಾಷ್ಟ್ರೀಯ ವ್ಯಾಪಾರ), ಸಾದಿ ಅನುಗ್ನಾ ರಾವ್ (ಸಾರ್ವಜನಿಕ ಆಡಳಿತ ಮತ್ತು ನೀತಿ ಅಧ್ಯಯನಗಳು) ಗೌರವವನ್ನು ಪಡೆದರು.