ಕೃಷಿ ಕ್ಷೇತ್ರ ಬಲವರ್ಧನೆ ಅಗತ್ಯ: ಶಾಸಕ ಗೋವಿಂದಪ್ಪ ಅಭಿಮತ

HSD tapcms 10
Published on

ಹೊಸದುರ್ಗ: ತಾಲೂಕಿನ ಕೃಷಿಕರ ಬದುಕನ್ನು ಕಟ್ಟಿಕೊಡುವ ಕಾರ್ಯದಲ್ಲಿ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ ಯಶಸ್ಸಿನತ್ತ ಮುನ್ನಡೆಯುತ್ತಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ವಾರ್ಷಿಕ ಸಭೆ ಹಾಗೂ ನೂತನ ವೇ ಬ್ರಿಡ್ಜ್ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಟಿಎಪಿಸಿಎಂಎಸ್ ತಾಲೂಕಿನ ರೈತರ ಸಂಸ್ಥೆಯಾಗಿದೆ. ಕೃಷಿ ಕಾರ್ಯಕ್ಕೆ ಅಗತ್ಯವಾದ ಗೊಬ್ಬರ ಮತ್ತಿತರ ಕೃಷಿ ಪರಿಕರಗಳನ್ನು ರೈತರಿಗೆ ಒದಗಿಸುವ ಕೆಲಸ ಮಾಡುತ್ತಿದೆ.

ಕೃಷಿ ಉತ್ಪನ್ನಗಳನ್ನು ಶೇಖರಿಸಲು ಗೋದಾಮು ಹಾಗೂ ವೇಬ್ರಿಡ್ಜ್ ನಿರ್ಮಿಸಿದೆ. ಸರ್ಕಾರದ ಪಡಿತರ ಆಹಾರವನ್ನು ನ್ಯಾಯಬೆಲೆ ಅಂಗಡಿಗಳಿಗೆ ವ್ಯವಸ್ಥಿತವಾಗಿ ವಿತರಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜು ಮಾತನಾಡಿ, ಬೆಳೆಯನ್ನು ದಾಸ್ತಾನು ಮಾಡಲು 600 ಮೆಟ್ರಿಕ್ ಟನ್ ಸಾಮಥ್ಯದ 2 ಗೋದಾಮುಗಳನ್ನು ನಿರ್ಮಿಸಲಾಗಿದೆ.

1 ಸಾವಿರ ಮೆಟ್ರಿಕ್ ಟನ್ ಸಾರ್ಮಥ್ಯದ ಮತ್ತೊಂದು ಗೋದಾಮು ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಾಕ್ಷ ಮಂಜುನಾಥ್, ಕಾರ್ಯದರ್ಶಿ ಸಂತೋಷ್, ನಿರ್ದೇಶಕರಾದ ಎಚ್.ಎಸ್.ಶ್ರೀಧರ್ ಭಟ್, ನಂಜುಂಡಪ್ಪ, ಮಂಜುನಾಥ್, ರಂಗರಾವ್, ರೇಣುಕಾ, ಜಯಣ್ಣ, ಸುವರ್ಣಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net