ಲೋಕಾ ಬಲೆಗೆ ಬಿದ್ದ ಕೃಷಿ ಅಧಿಕಾರಿ

Published on

 ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದ ಶಂಕರಯ್ಯ ಬಂಧಿತ

ಚಿಕ್ಕಬಳ್ಳಾಪುರ : ಜಿಲ್ಲಾಮಟ್ಟದ ಕಚೇರಿಯಲ್ಲಿ ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದ ಸಹಾಯಕ ಕೃಷಿ ಅಧಿಕಾರಿ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಬಾಗೇಪಲ್ಲಿ ತಾಲೂಕು ಸಹಾಯಕ ಕೃಷಿ ಅಧಿಕಾರಿ ಶಂಕರಯ್ಯ(49) ಬಂಧಿತ. ಕಾರ್ಯಾಚರಣೆ ವೇಳೆ ಬರೋಬ್ಬರಿ 13.03 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.

3 ಲಕ್ಷ ರೂ.ಗೆ ಬೇಡಿಕೆ

ನೀರಾವರಿ ಯೋಜನೆಯ ಬಾಕಿ ಬಿಲ್ಗಳನ್ನು ಮಂಜೂರು ಮಾಡಲು ಸಹಾಯಕ ಕೃಷಿ ಅಧಿಕಾರಿ ಶಂಕರಯ್ಯ 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಕೊನೆಗೆ 2 ಲಕ್ಷ ರೂ. ಪಡೆಯಲು ಒಪ್ಪಿದ್ದರು ಎನ್ನಲಾಗಿದೆ. ಇದರ ಬಗ್ಗೆ ದೂರುದಾರ ಗುತ್ತಿಗೆದಾರರು ಲೋಕಾಯುಕ್ತರ ಗಮನ ಸೆಳೆಯುತ್ತಿದ್ದಂತೆ ಕಾರ್ಯಾಚರಣೆ ನಡೆದಿದೆ. 2 ಲಕ್ಷ ರೂ. ಪಡೆಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿ ಸಿಕ್ಕಿಬಿದ್ದಿದ್ದಾನೆ.

13.03 ಲಕ್ಷ ರೂ ವಶ

ಆರ್ಥಿಕ ವರ್ಷ ಅಂತ್ಯಗೊಂಡ ಬಳಿಕ ಸಹ ಬಿಲ್ ಮಂಜೂರಾತಿ ಕೆಲಸ ನಡೆಯುತ್ತಿದೆ. ಇಲಾಖೆಯ ಅಧಿಕಾರಿಗಳು ಉಳಿಸಿಕೊಂಡಿರುವ ಚೆಕ್‌ಗಳನ್ನು ಹಣ ಪಡೆದುಕೊಂಡ ಬಳಿಕ ನೀಡುತ್ತಿದ್ದಾರೆ. ಇನ್ನೂ ಯಾವುದೇ ಯೋಜನೆಗೆ ಅನುಮೋದನೆ ನೀಡಲು ಸಂಬಂಧಪಟ್ಟವರು ಮೊದಲೇ ಲಂಚ ನೀಡಿರಬೇಕು. ಇಂತಹ ಮಾತುಗಳ ನಡುವೆ ಲೋಕಾ ದಾಳಿ ವೇಳೆ ಜಿಲ್ಲಾಮಟ್ಟದ ಕೃಷಿ ಇಲಾಖೆ ಕಚೇರಿಯಲ್ಲಿ ಒಟ್ಟು 13.03 ಲಕ್ಷ ರೂ. ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net