ಕೇಂದ್ರ ತಂಡಕ್ಕೆ ಬೆಳೆ ಬರ ಸ್ಥಿತಿ ಮನವರಿಕೆ ಮಾಡಿಸಿ : ಅಧಿಕಾರಿಗಳಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸೂಚನೆ

ಕಲಬುರಗಿ ರಾಜ್ಯದ ಬರಪೀಡಿತ ತಾಲೂಕುಗಳಿಗೆ ಈ ವಾರ ಅಧ್ಯಯನ ನಡೆಸಲು ಬರುತ್ತಿರುವ ಕೇಂದ್ರ ಅಧ್ಯಯನ ತಂಡಕ್ಕೆ ಬೆಳೆಹಾನಿ ಮತ್ತು ಬರಗಾಲದ ವಾಸ್ತವ ಸ್ಥಿತಿಯನ್ನು ಕೃಷಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದರು.
IMG-20231003-WA0014
Published on

ಕಲಬುರಗಿ ವಿಭಾಗದ ಪ್ರಗತಿ ಪರಿಶೀಲನೆ | ಬೆಳೆ ಹಾನಿ ಸಮೀಕ್ಷೆ ಬೇಗ ಮುಗಿಸಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಜ್ಯದ ಬರಪೀಡಿತ ತಾಲೂಕುಗಳಿಗೆ ಈ ವಾರ ಅಧ್ಯಯನ ನಡೆಸಲು ಬರುತ್ತಿರುವ ಕೇಂದ್ರ ಅಧ್ಯಯನ ತಂಡಕ್ಕೆ ಬೆಳೆಹಾನಿ ಮತ್ತು ಬರಗಾಲದ ವಾಸ್ತವ ಸ್ಥಿತಿಯನ್ನು ಕೃಷಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಭಾಗದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆ ಕೃಷಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಈ ಸಲ ಬರಗಾಲ ಎರಡು ತೆರನಾಗಿದೆ. ಹಸಿ ಬರ ಮತ್ತು ಸರಿಯಾದ ಸಮಯಕ್ಕೆ ಮಳೆ ಬಾರದೆ ಬೆಳೆ ಬಿತ್ತನೆಯಾದರೂ ಇಳುವರಿ ಬರದಂತಹ ಸ್ಥಿತಿ ಇದೆ. ಈಚೆಗೆ ಮಳೆಯಾಗಿದ್ದರಿಂದ ನೋಡಲು ಹಸಿರು ಕಾಣುತ್ತದೆ. ಆದರೆ ವಾಸ್ತವ ಸ್ಥಿತಿ ಅರಿವಿಗೆ ತರುವ ಕೆಲಸ ಮಾಡಿ ಎಂದರು.
ಕೇAದ್ರ ತಂಡ ಬರುವ ಮುನ್ನವೇ ಬೆಳೆ ಹಾನಿ ಸಮೀಕ್ಷೆ ಕಾರ್ಯ ಮುಗಿಸಬೇಕು. ಏಳು ಜಿಲ್ಲೆ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ರೈತರ ಸಮಸ್ಯೆಗೆ ಸ್ಪಂದಿಸಬೇಕು. ಸರ್ಕಾರ ನೀಡಿದ ಅನುದಾನ ಖರ್ಚು ಮಾಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವರು, ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಅನ್ನದಾತರ ಶ್ರೇಯೋಭಿವೃದ್ಧಿಗೆ ಶೇ.೧೦೦ ಅನುದಾನ ಖರ್ಚು ಮಾಡಿ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಬೇಕು ಎಂದು ತಾಕೀತು ಮಾಡಿದರು.
ರೈತರು ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಕೆವೈಸಿ ಪ್ರಮುಖವಾಗಿದೆ. ಜಿಲ್ಲೆಯಲ್ಲಿ ಡಿಸಿ, ಸಿಇಒ ಸಹಕಾರ ಪಡೆದು ಶೇ.೧೦೦ ಪ್ರಗತಿ ಸಾಧಿಸಬೇಕು. ಹಿಂಗಾರು ಬೆಳೆಗೆ ಬೇಕಾದ ಬೀಜ, ರಸಗೊಬ್ಬರ ದಾಸ್ತಾನು ಸಾಕಷ್ಟಿದೆ. ಜಂಟಿ ಕೃಷಿ ನಿರ್ದೇಶಕರು ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಕೃಷಿ ಆಯುಕ್ತ ವೈ.ಎಸ್. ಪಾಟೀಲ್ ಮಾತನಾಡಿ, ಯೋಜನೆ ಅನುಷ್ಠಾನಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಯಾದಗಿರಿ ಜಿಲ್ಲೆಯವರು ೩೮೮.೯೫ ಲಕ್ಷ ರೂ.ಗಳಲ್ಲಿ ಕೇವಲ ೮೩.೧೯ ಲಕ್ಷ, ರಾಯಚೂರಿನಲ್ಲಿ ೮೨೮ ಲಕ್ಷ ಪೈಕಿ ೪೭೮ ಲಕ್ಷ ಮಾತ್ರ ಖರ್ಚು ಮಾಡಿರುವುದು ವಿಭಾಗದಲ್ಲಿಯೇ ಕಡಿಮೆ. ಏಕೆ ಹಣ ಖರ್ಚು ಮಾಡಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್, ಬಿ.ಆರ್. ಪಾಟೀಲ್, ಎಂ.ವೈ. ಪಾಟೀಲ್, ಜಿಪಂ ಸಿಇಒ ಭನ್ವರ್‌ಸಿಂಗ್ ಮೀನಾ, ಕೃಷಿ ನಿರ್ದೇಶಕ ಜಿ.ಟಿ. ಶಿವಪುತ್ರ, ಹೆಚ್ಚುವರಿ ಕೃಷಿ ನಿರ್ದೇಶಕರಾದ ವೆಂಕಟರಾಮ ರೆಡ್ಡಿ, ಅಂಥೋನಿ ಅಮಿನ್ಯೂಯಲ್, ಜಂಟಿ ಕೃಷಿ ನಿರ್ದೇಶಕರಾದ ಜಿಯಾವುಲ್ಲಾ, ಸಮದ್ ಪಟೇಲ್, ಶರಣಪ್ಪ ಮುದಗಲ್, ಡಾ.ರಿತೇಂದ್ರನಾಥ ಸುಗೂರು, ದೇವಿಕಾ, ಮುತ್ತುರಾಜ, ರುದ್ರೇಶಪ್ಪ, ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net