ಬಯಲು ಕಲಿಕೆ-ಕೃಷಿ ದಿನಾಚರಣೆ

bhatha
ಮೊಗ್ರಾಲ್ ಪುತ್ತೂರು ಶಾಲಾ ವಿದ್ಯಾರ್ಥಿಗಳಿಂದ ಬಯಲು ಕಲಿಕೆ-ಕೃಷಿ ದಿನಾಚರಣೆ ಸಂಭ್ರಮ ನಡೆಯಿತು. ಕೃಷಿ ಅಧಿಕಾರಿ ಅಕ್ಷತಾ ವಯೋಲರಿ, ಮುಖ್ಯಸ್ಥೆ ಬೀನಾ ಸಿ.ಟಿ., ಪಿ.ಟಿ.ಎ ಉಪಾಧ್ಯಕ್ಷ ಖಾದರ್ ಕಡವತ್, ಮಾಹಿನ್ ಕುನ್ನಿಲ್ ಮತ್ತಿತರರಿದ್ದರು.
Published on

ಕುಂಬಳೆ: ಮೊಗ್ರಾಲ್ ಪುತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಪರಿಸರ ಸಂಘ, ಎನ್.ಜಿ.ಸಿ. ಜೀವವೈವಿಧ್ಯ ಕ್ಲಬ್‌ಗಳು ಕೃಷಿ ದಿನ ಆಚರಣೆ ದೇಸಿ ತರಕಾರಿ ಬೀಜಗಳ ವಿತರಣೆ, ಕೃಷಿ ಜ್ಞಾನ ತರಗತಿ, ರೈತರಿಗೆ ಸನ್ಮಾನ, ಹಲಸಿನ ನಾಟಿ ಮುಂತಾದ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಿದ್ದವು.

ಬಲಿತ ಭತ್ತದ ಗದ್ದೆಗಳ ಹುಡುಕಾಟದ ಕ್ಷೇತ್ರ ಪ್ರವಾಸ ಮಕ್ಕಳಿಗೆ ಹೊಸ ಜ್ಞಾನ, ಅನುಭವಗಳ ಆಗರವಾಗಿತ್ತು. ಭತ್ತದ ಸಸಿಗಳಿಂದ ತುಂಬಿರುವ ಗದ್ದೆಯಲ್ಲಿ ರೈತರು, ಕೃಷಿ ಕಾರ್ಮಿಕರೊಂದಿಗೆ ಮಕ್ಕಳು ನೇಜಿ ಕೀಳುತ್ತಾ, ಅನುಭವ ಪಡೆದುಕೊಂಡರು. ಮೊಗ್ರಾಲ್ ಪುತ್ತೂರು ಕೃಷಿ ಅಧಿಕಾರಿ ಅಕ್ಷತಾ ವಯೋಲರಿ ಕಲಿಕಾ ತರಗತಿ ಉದ್ಘಾಟಿಸಿದರು. ಶಾಲೆ ಬಳಿಯಿರುವ ತರಕಾರಿ ತೋಟಕ್ಕೆ ಭೇಟಿ ನೀಡುವ ಮೂಲಕ ಆರಂಭವಾದ ಬಯಲನ್ನು ತಿಳಿಯುವ ಯಾತ್ರೆ ಬಳ್ಳೂರು ಮೈದಾನದಲ್ಲಿ ಮುಕ್ತಾಯವಾಯಿತು.

ಮುಖ್ಯಸ್ಥೆ ಬೀನಾ ಸಿ.ಟಿ., ಪಿ.ಟಿ.ಎ ಉಪಾಧ್ಯಕ್ಷ ಖಾದರ್ ಕಡವತ್, ಮಾಹಿನ್ ಕುನ್ನಿಲ್, ಜನಾರ್ದನನ್ ಟಿ.ವಿ., ಸ್ನೇಹಾ ಭಾಸ್ಕರನ್ ಭಾಗವಹಿಸಿದ್ದರು. ರೈತರಾದ ಕೃಷ್ಣಪ್ಪ, ಅರುಣ್, ರಘುರಾಮ್, ಕೃಷಿ ಕಾರ್ಮಿಕರಾದ ಪದ್ಮಾವತಿ, ಕಮಲಾ, ದೇವಕಿ, ಲೀಲಾ, ವೇದಾವತಿ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕರಾದ ಅಲಿ ಅಕ್ಬರ್, ಅಜ್ಮ್ಮಲ್ ಮುಬಾರಕ್, ಸಾದಿಕ್, ಮಾಜಿತಾ, ರೇಷ್ಮಾ, ಶಿಲ್ಪಾ, ದರ್ಶನಾ, ಫರ್ಸೀನಾ, ಸೌಮ್ಯ ಅನುಷಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net