ಬಿಜೆಪಿಯಿಂದ ಕೃಷಿ ದಿನಾಚರಣೆ

Bdk_BJP
Published on

ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಕರ್ಷಕ ಮೋರ್ಚಾ ನೇತೃತ್ವದಲ್ಲಿ ಮೀಂಜ ಮದಂಗಲ್ಲು ಮಂದಿರದಲ್ಲಿ ಕೃಷಿ ದಿನಾಚರಣೆ ಶನಿವಾರ ನಡೆಯಿತು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ರೈ ಉದ್ಘಾಟಿಸಿದರು. ಕರ್ಷಕ ಮೋರ್ಚಾ ಮಂಡಲ ಅಧ್ಯಕ್ಷ ಸದಾಶಿವ ಚೇರಾಲ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ.ಮಾತನಾಡಿದರು. ಪ್ರಗತಿಪರ ಕೃಷಿಕರಾದ ಸೀನ ಪೂಜಾರಿ, ಪ್ರಮೋದ್ ನಾಯ್ಕ, ಕಿರಣ್ ಭಂಡಾರಿಯವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕಷರ್ಕ ಮೋರ್ಚಾ ಕಾರ್ಯದರ್ಶಿ ಪ್ರವೀಣ್ ಚಂದ್ರ ಬಲ್ಲಾಳ್, ಪದ್ಮನಾಭ ರೈ, ಕೆ.ವಿ.ಭಟ್, ಪಯತೀರಾಜ್ ಶೆಟ್ಟಿ, ಚಂದ್ರಹಾಸ್ ಕಡಂಬಾರ್, ಲೋಕೇಶ್ ನೋಂಡ, ನಾರಾಯಣ್ ನಾಯ್ಕ, ಕೃಷ್ಣ ಬೆಜ್ಜ ಮೊದಲಾದವರು ಉಪಸ್ಥಿತರಿದ್ದರು. ನಾಗೇಶ್ ಬಳ್ಳೂರ್ ಸ್ವಾಗತಿಸಿ, ಚಂದ್ರಹಾಸ ಕಡಂಬಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net