ವ್ಯವಸಾಯ ಸೇವಾ ಸಹಕಾರಿಗೆ 71.73 ಲಕ್ಷ ರೂ. ಲಾಭ

sabhe
ಬೆಳ್ಮಣ್ ವ್ಯವಸಾಯ ಸೇವಾ ಸಹಕಾರಿ ಸಂಘ ಮಹಾಸಭೆಯಲ್ಲಿ ರೈತರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಸೆವ್ರಿನ್ ಡೇಸಾ, ರಾಮಚಂದ್ರ ಎಮ್, ಯೋಗೀಶ್ ದೇವಾಡಿಗ, ದ್ವಾರಕನಾಥ್ ಜೋಗಿ ಉಪಸ್ಥಿತರಿದ್ದರು
Published on

ಕಾರ್ಕಳ: ಸರ್ವರ ಸಹಕಾರವಿದ್ದಲ್ಲಿ ಸಂಘದ ಸಮಗ್ರ ಏಳಿಗೆ ಸಾಧ್ಯ. ಪ್ರಸ್ತುತ ಸಾಲಿನಲ್ಲಿ 71.73 ಲಕ್ಷ ಲಾಭ ಗಳಿಸಿದ್ದು, ಶೇ.13 ಡಿವಿಡೆಂಡ್ ನೀಡಲಾಗಿದೆ ಎಂದು ಬೆಳ್ಮಣ್ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹೇಳಿದರು.

ಬೆಳ್ಮಣ್ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಕಾರ್ಯ ವ್ಯಾಪ್ತಿಯ 10 ಮಂದಿ ಪ್ರಗತಿಪರ ರೈತ ಸದಸ್ಯರಿಗೆ ಸನ್ಮಾನ, ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಉಪಾಧ್ಯಕ್ಷ ದಿನೇಶ್ ಕುಲಾಲ್, ನಿರ್ದೇಶಕರಾದ ದೇವೇಂದ್ರ ನಾಯಕ್, ಕೆ.ಸಂಜೀವ ಶೆಟ್ಟಿ, ಜೆರಾಲ್ಡ್ ಡಿಸೋಜ, ರಘುರಾಮ್ ರಾವ್, ಉದಯ ನಾಯ್ಕ, ವಿಶಾಲಾಕ್ಷಿ ಬಂಗೇರ, ಸೆವ್ರಿನ್ ಡೇಸಾ, ರಾಮಚಂದ್ರ ಎಂ, ಯೋಗೀಶ್ ದೇವಾಡಿಗ, ಸಂಘದ ಹಿರಿಯ ಗುಮಾಸ್ತ ದ್ವಾರಕನಾಥ್ ಜೋಗಿ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ನಾಯಕ್ ಅಂದಾಜು ಆಯ-ವ್ಯಯ, ಲೆಕ್ಕಪರಿಶೋಧನಾ ವರದಿ, ನಿವ್ವಳ ಲಾಭಾಂಶ ವಿಂಗಡಣೆ ಮಂಡಿಸಿದರು. ಸಿಬ್ಬಂದಿ ರವಿರಾಜ್ ಕುಲಾಲ್ ವಾರ್ಷಿಕ ವರದಿ ಮಂಡಿಸಿದರು. ಸಿಬ್ಬಂದಿ ರಾಜೇಶ್ ಮಹಾಸಭೆ ಉದ್ದೇಶ ತಿಳಿಸಿದರು. ಜೆರಾಲ್ಡ್ ಡಿಸೋಜ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net