ಅಕ್ರಮ ಮರಳು ಸಾಗಾಟ ವಾಹನ ವಶ

sand
ಸಾಂದರ್ಭಿಕ ಚಿತ್ರ
Published on

ಕುಂದಾಪುರ: ಕಳವು ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರಳನ್ನು ವಾಹನ ಸಮೇತ ಕುಂದಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೀಜಾಡಿ ಗ್ರಾಮದ ಫಿಶರೀಷ್ ರಸ್ತೆಯಲ್ಲಿ ಬೀಚ್ ಕಡೆಯಿಂದ ಅಕ್ರಮ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಬೀಜಾಡಿ ಫಿಶರೀಷ್ ರಸ್ತೆಗೆ ಹೋಗಿ ಪರಿಶೀಲಿಸುತ್ತಿರುವ ಸಂದರ್ಭ ಬೀಜಾಡಿ ಬೀಚ್ ಕಡೆಯಿಂದ ಬರುತ್ತಿದ್ದ ಟಿಪ್ಪರ್ ವಾಹನ ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಟಿಪ್ಪರ್ ಹಿಂಬದಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮರಳು ಸಾಗಿಸುತ್ತಿರುವುದು ಪತ್ತೆಯಾಗಿದೆ. ಮರಳನ್ನು ಗಿಳಿಯಾರು ಗ್ರಾಮದ ತೋಡಿನಲ್ಲಿ ತೆಗೆದು ಅಲ್ಲಿಂದ ಕಳವು ಮಾಡಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಟಿಪ್ಪರ್ ಚಾಲಕ ಪುರುಷೋತ್ತಮ ಹಾಗೂ ಟಿಪ್ಪರ್ ಮಾಲೀಕ ಗೌತಮ್ ಎಂಬುವರನ್ನು ವಶಕ್ಕೆ ಪಡೆಯಲಾಗಿದ್ದು, ಮರಳು ಸಮೇತ ವಾಹನ ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಸಿಬ್ಬಂದಿ ರಾಘವೇಂದ್ರ ಮತ್ತು ಮೌನೇಶ್ ಕಾರ್ಯಾಚರಣೆ ನಡೆಸಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net