ಡ್ಯಾಮ್ ಗೇಟು ತೆರೆಯದೇ ಕೃಷಿ ಭೂಮಿ ಮುಳುಗಡೆ

hbr-1
Published on

ಹೆಬ್ರಿ: ಹೆಬ್ರಿ ತಾಲೂಕಿನ ಚಾರ ನವೋದಯದ ಬಳಿ ನಿರ್ವಾಣವಾಗಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನ ನೀರು ನಿಲ್ಲಲು ಅಳವಡಿಸಿದ್ದ ಗೇಟ್ ತೆರೆಯದೆ ಕೃಷಿ ಭೂಮಿ ಮುಳುಗಡೆಯಾದ ಟನೆ ಕುಚ್ಚೂರಿನಲ್ಲಿ ನಡೆದಿದೆ.

ಸಣ್ಣ ನೀರಾವರಿ ಇಲಾಖೆ ಡ್ಯಾಮ್‌ನ ಸ್ವಯಂ ಚಾಲಿತ ಗೇಟನ್ನು ಮೇಲೆತ್ತಿದ್ದಾರೆ. ಆದರೆ ಕುಚ್ಚೂರು ಬದಿಯಿಂದ ನೀರು ಸೀತಾ ನದಿಗೆ ಸೇರುವ ಜಾಗದಲ್ಲಿ ಡ್ಯಾಮ್‌ನ ನೀರು ನಿಲ್ಲಲು ಗೇಟ್ ಅಳವಡಿಕೆ ವಾಡಿದ್ದರು. ಆದರೆ ಅದನ್ನು ತೆರೆಯದೆ ನಿರ್ಲಕ್ಷ್ಯ ವಾಡಿರುವುದರಿಂದ ಮತ್ತೆ ಕೃಷಿಕರಿಗೆ ಸಂಕಷ್ಟ ಎದುರಾಗಿದೆ.

ಈ ಹಿಂದೆ ಭಾರಿ ಪ್ರವಾಣದಲ್ಲಿ ಈ ಜಾಗದಲ್ಲಿ ಕೃಷಿ ಮುಳುಗಡೆಯಾಗಿತ್ತು. ಪುಷಿಂಗ್ ವ್ಯವಸ್ಥೆ ವಾಡಿಕೊಟ್ಟು ನಂತರದಲ್ಲಿ ನೀರು ಕೃಷಿ ಭೂಮಿಯಿಂದ ಹೊರ ಹೋಗುವ ವ್ಯವಸ್ಥೆ ವಾಡಲಾಗಿತ್ತು. ಆದರೆ ಈಗ ನಿರ್ಲಕ್ಷ್ಯ ಮಾಡಿ ಗೇಟು ತೆರೆಯದೆ ಇರುವುದರಿಂದ ಭಾರಿ ಪ್ರವಾಣದ ನೀರು ಅಡಕೆ ತೋಟದಲ್ಲಿ ನಿಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net