ಸಹಕಾರ ಸಂಘದ ಅಧ್ಯಕ್ಷರಾಗಿ ಈರಪ್ಪ ಹಾಲಾಪುರ ಆಯ್ಕೆ

Untitled design (4)
ಗೊರೇಬಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಈರಪ್ಪ ಹಾಲಾಪುರ ಅವರನ್ನು ಗೌರವಿಸಲಾಯಿತು.
Published on

ಗೊರೇಬಾಳ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷರಾಗಿ ಈರಪ್ಪ ಹಾಲಾಪುರ ಅವಿರೋಧವಾಗಿ ಶನಿವಾರ ಆಯ್ಕೆಯಾದರು.
ಸಂಘದ ಅಧ್ಯಕ್ಷ ಸ್ಥಾನಕ್ಕೆ ಚನ್ನಬಸವರಾಜ ರಾಜಿನಾಮೆ ನೀಡಿದ್ದರು. ತೆರುವಾದ ಅಧ್ಯಕ್ಷ ಸ್ಥಾನಕ್ಕೆ ಈರಪ್ಪ ಹಾಲಾಪುರ ಅವರು ಮಾತ್ರ ನಾಮಪತ್ರವನ್ನು ಸಲ್ಲಿಸಿದ್ದರು. ಹೀಗಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರತ್ನಮ್ಮ ಘೋಷಿಸಿದರು.

ಸದಸ್ಯರ ಒಮ್ಮತದ ಮೇರೆಗೆ ಆಯ್ಕೆ

ನೂತನ ಅಧ್ಯಕ್ಷ ಈರಪ್ಪ ಹಾಲಾಪುರ ಅವರನ್ನು ಸಂಘದ ನಿರ್ದೇಶಕ ಹಾಗೂ ಮುಖಂಡರು ಅಭಿನಂದಿಸಿದರು. ಆರ್.ಡಿ.ಸಿ.ಸಿ.ಬ್ಯಾಂಕ್‌ನ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಪ್ರಮುಖರಾದ ಎನ್.ಸಣ್ಣಭೀಮನಗೌಡ, ಎಂ.ರಂಗನಗೌಡ, ಡಾ.ಶಾಮಿದಸಾಬ್, ಚನ್ನಬಸವರಾಜ, ಬುಡ್ಡಪ್ಪ ನಾಯಕ, ಶರಣಪ್ಪ ಹೂಗಾರ, ಮಂಜುನಾಥ ಭೋವಿ, ಹುಸೇನಪ್ಪ ಹರಿಜನ, ದೊಡ್ಡಮಾಬುಸಾಬ್, ಚೆನ್ನಮ್ಮ, ಅಮರೇಶ ಕೊಂತನೂರ, ಗೋವಿಂದರಡ್ಡಿ, ರಂಗನಾಥ ಗೌಡನಬಾಯಿ, ಪ್ರಕಾಶ ಗಡ್ಡದ, ಆರ್.ಪಾಲಾಕ್ಷಗೌಡ, ಆರ್.ರಾಮನಗೌಡ, ಗಂಗಾಧರ ಹೂಗಾರ, ಬಸವರಾಜಪ್ಪ ಗಾಣದಾಳ, ಎನ್.ವಿರುಪಾಕ್ಷಪ್ಪ, ಶರಣಪ್ಪ ಭೋವಿ, ಶಿವಯ್ಯ ತಾತ, ಎನ್.ವೆಂಕಟೇಶ್ವರ ರಾವ್ ಗೊರೇಬಾಳ ಕ್ಯಾಂಪ್, ಅಶೋಕ ಮ್ಯಾಗಳಮನಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net