More

    KSRTC ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ; ಹೀಗಿದೆ ಬಸ್​​​ ವಿಶೇಷತೆಗಳು…

    ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್​​​​​​​​ಟಿಸಿ)ದ ನೂತನ 148 ಬಸ್​​​​​ಗಳಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ವಿಧಾನಸೌಧದ ಮುಖ್ಯ ದ್ವಾರದ ಮೆಟ್ಟಿಲ ಬಳಿ ನೂತನ ಬಸ್​​​​​ಗಳಿಗೆ ಹಸಿರು ನಿಶಾನೆ ತೋರಿದ ಸಿಎಂ, ಬಳಿಕ ಸಂಪುಟ ಸಹೋದ್ಯೋಗಿಗಳೊಂದಿಗೆ ಬಸ್​​​​ಗಳನ್ನು ಪರಿಶೀಲಿಸಿದರು. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಚಿವರಾದ ಮುನಿಯಪ್ಪ, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ ಹಾಗೂ ಸಾರಿಗೆ ಅಧಿಕಾರಿಗಳು ಹಾಜರಿದ್ದರು.

    ಇಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿಎಂ, ನೂತನ ಬಸ್ ಗಳಿಗೆ ಚಾಲನೆ ಕೊಟ್ಟು ಮೈಸೂರಿನತ್ತ ಪಯಣಿಸಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ 24,000 ಬಸ್​​​​​ಗಳು ಓಡಾಟ ಮಾಡ್ತಿವೆ. ಪ್ರತಿ ವರ್ಷ ಶೇಕಡ 10ರಷ್ಟು ಬಸ್​​​​​ಗಳು ಗುಜರಿಗೆ ಸೇರುತ್ತಿವೆ. ನಾಲ್ಕೂ ನಿಗಮಗಳಲ್ಲಿ ಹಲವು ವರ್ಷಗಳಿಂದ ನೇಮಕಾತಿ ಆಗಿಲ್ಲ. ಕಳೆದ 6 ವರ್ಷದಿಂದ ಹೊಸ ಬಸ್ ಖರೀದಿ ಮಾಡಿರಲಿಲ್ಲ. ಇನ್ನೊಂದು ವರ್ಷದಲ್ಲಿ 1,000 ಬಸ್ ಗಳು ನಿಗಮಗಳಿಗೆ ಸೇರ್ಪಡೆಯಾಗಲಿವೆ ಎಂದರು.

    ಬಾಕಿ ಇರುವ ನೇಮಕಾತಿಯೂ ಆಗಲಿದೆ. ಜನಸಂಖ್ಯೆಗೆ ಅನುಗುಣವಾಗಿ ಬಸ್​​​​ಗಳು ಇಲ್ಲ, ಕೊರತೆ ಇದೆ. 12,000 ಬಸ್ ಗಳ ಅಗತ್ಯವಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 2 ಕೋಟಿ ಜನಸಂಖ್ಯೆ ಇದೆ. ಆ ಜನಸಂಖ್ಯೆಗೆ ಅನುಗುಣವಾಗಿ ಬಸ್ ಗಳನ್ನು ಒದಗಿಸುತ್ತೇವೆ ಎಂದರು.
    ನಾನ್ ಎಸಿ ಸ್ಲೀಪರ್ ಬಸ್ ಗಳಿಗೆ ಬೇಡಿಕೆ ಇತ್ತು. ಹಾಗಾಗಿ, ಇವತ್ತು ವಿನೂತನ ಮಾದರಿಯ ನಾನ್ ಎಸಿ ಬಸ್ ಗಳಿಗೆ ಚಾಲನೆ ನೀಡಲಾಗಿದೆ. 100 ಹೊಸ ನಾನ್ ಎಸಿ ಬಸ್ ಗಳು ಕೆ ಎಸ್ ಆರ್ ಟಿಸಿಗೆ ಸೇರ್ಪಡೆಯಾಗಿವೆ ಎಂದು ತಿಳಿಸಿದರು.

    ಇಂದು ಒಟ್ಟು 148 ಹೊಸ ಬಸ್​ಗಳಿಗೆ ಚಾಲನೆ ನೀಡಲಾಗಿದ್ದು, ಈ ಪೈಕಿ 44 ಎಸಿ ಸ್ಲೀಪರ್ ಮತ್ತು ನಾಲ್ಕು ನಾನ್ ಎಸಿ ಸ್ಪೀಪರ್ ಬಸ್​ಗಳು ಒಳಗೊಂಡಿವೆ. ಆದರೆ, ಸ್ಲೀಪರ್ ಬಸ್​ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. 40 ನಾನ್ ಎಸಿ ಸ್ಲೀಪರ್ ಹಾಗೂ 100 ನಗರ ಸಾರಿಗೆ ಬಸ್ಸುಗಳು, ಅಶೋಕ ಲೇಲ್ಯಾಂಡ್ ಕಂಪನಿಗೆ ಸೇರಿದ್ದು, ನಾಲ್ಕು ನಾನ್ ಎಸಿ ಸ್ಲೀಪರ್, ನಾಲ್ಕು ಎಸಿ ಸ್ಲೀಪರ್ ಬಸ್​ಗಳು ಟಾಟಾ ಕಂಪನಿಯದ್ದಾಗಿವೆ.

    ಬಸ್​​​​ ಸ್ಪೆಷಾಲಿಟಿ
    * ಬಿಎಸ್-6 ತಂತ್ರಜ್ಞಾನದ ಮಾದರಿಯ ಎಚ್.ಪಿ.ಇಂಜಿನ್ ಅಳವಡಿಕೆ
    * 11.3 ಮೀಟರ್ ಉದ್ದವಿರಲಿದೆ ನಾನ್ ಎಸಿ ಬಸ್
    * ಹೈಟೆಕ್ ವಿನ್ಯಾಸದ 30 ಸ್ಲೀಪರ್ ಬರ್ತ್ ಸೀಟ್​ಗಳು
    * ಪ್ರತಿ ಸೀಟಿಗೂ ಮೊಬೈಲ್ ಹಾಗೂ ಲ್ಯಾಪ್ ಟಾಪ್​ಗಳ ಚಾರ್ಜಿಂಗ್ ಹಾಗೂ ಮೊಬೈಲ್ ಸ್ಟ್ಯಾಂಡ್ ವ್ಯವಸ್ಥೆ
    * ಸೀಟ್ ನಂಬರ್ ಮೇಲೆ ಎಲ್​ಇಡಿ ಅಳವಡಿಕೆ
    * ಓದಲು ಉತ್ತಮ ಬೆಳಕಿನ ಎಲ್​ಇಡಿ ಲೈಟ್ ಅಳವಡಿಕೆ
    * ಬಸ್​ನಲ್ಲಿ ಆಡಿಯೋ ಸ್ವೀಕರ್​ಗಳ ಮೂಲಕ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ
    * ಡಿಜಿಟಲ್ ಗಡಿಯಾರ ಜತೆಗೆ ಎಲ್​ಇಡಿ ಫ್ಲೋರ್
    * ಪ್ರತಿ ಪ್ರಯಾಣಿಕರಿಗೆ ಚಪ್ಪಲಿ ಇಡಲು ಸ್ಥಳಾವಕಾಶದ ವ್ಯವಸ್ಥೆ
    * ಪ್ರಯಾಣಿಕರಿಗೆ ತಲೆದಿಂಬಿನ ವ್ಯವಸ್ಥೆ
    * ಚಾಲಕರಿಗೆ ಸಹಾಯವಾಗಲೂ ಬಸ್ ಹಿಂಭಾಗದಲ್ಲಿ ಹೈಟೆಕ್ ಕ್ಯಾಮರಾ ಅಳವಡಿಕೆ
    * 40 ಬಸ್‌ಗಳ ಪೈಕಿ 30 ಬಸ್‌ಗಳು ರಾಜ್ಯದೊಳಗೆ, ಉಳಿದ 10 ಬಸ್‌ಗಳು ಬೆಂಗಳೂರಿನಿಂದ‌ ಹೊರರಾಜ್ಯಗಳಿಗೆ ಸಂಚರಿಸಲಿವೆ.
    * ಕೆಎಸ್‌ಆರ್‌ಟಿಸಿಯಲ್ಲಿ ನಾನ್‌ ಎಸಿ ಸ್ಲೀಪರ್‌ ಬಸ್‌ಗಳು ಆರಂಭವಾಗಿ ಸಾಕಷ್ಟು ವರ್ಷಗಳಾಗಿದ್ದು, ಬಸ್‌ಗಳಿಗೆ ಯಾವುದೇ ಹೆಸರಿಟ್ಟು ಬ್ರ್ಯಾಂಡಿಂಗ್‌ ಮಾಡಿರಲಿಲ್ಲ. ಸದ್ಯ ಪಲ್ಲಕ್ಕಿ ಎಂಬ ಬ್ರ್ಯಾಂಡ್ ನೇಮ್‌ ಇಡಲಾಗಿದೆ. ಈ ಹೆಸರನ್ನು ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.

    ಏಳು ಸೈನಿಕರು ಸೇರಿದಂತೆ 51 ಜನರು ಸಾವು, ನೂರಾರು ಮಂದಿ ನಾಪತ್ತೆ…ಸಿಕ್ಕಿಂನಲ್ಲಿ ಪ್ರವಾಹಕ್ಕೆ ಕಾರಣ ತಿಳಿಸಿದ ಸಿಎಂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts