

ಕುರುಗೋಡು: ರೈತ ಸಂಪರ್ಕ ಕೇಂದ್ರದಿಂದ ಕೃಷಿ ಪರಿಕರ, ಯಂತ್ರೋಪಕರಣವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ರೈತರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕೃಷಿ ಅಧಿಕಾರಿ ಎಂ.ದೇವರಾಜ ಹೇಳಿದರು.
ಇದನ್ನೂ ಓದಿ:ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಿ
ಕ್ಯಾದಿಗೆಹಾಳ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಕಸಿತ ಕೃಷಿಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಗರಿ ಕೆವಿಕೆ ವಿಜ್ಞಾನಿ ಡಾ.ರವಿ ಮಾತನಾಡಿ, ರೈತರು ಬೀಜ ಬಿತ್ತನೆ ಮೊದಲು ಬೀಜೋಪಚಾರ ಮಾಡಿದರೆ ಉತ್ತಮ ಬೆಳೆ ಬೆಳೆಯಲು ಸಾಧ್ಯ. ಗುಣಮಟ್ಟದ ಬೀಜ ಹಾಗೂ ಕೃಷಿ ತಜ್ಞರ ಸಲಹೆಯಂತೆ ಗೊಬ್ಬರ, ಔಷಧ ಸಿಂಪಡಣೆಯಿಂದ ದುಂದು ವೆಚ್ಚ ತಪ್ಪುತ್ತದೆ ಎಂದರು. ಕೃಷಿ ವಿಜ್ಞಾನಿ ಡಾ.ಆನಂದ, ಗೆಣಿಕೆಹಾಳ ಗ್ರಾಪಂ ಅಧ್ಯಕ್ಷೆ ನಾಗವೇಣಿ ದೊಡ್ಡಬಸವ, ಪ್ರಮುಖರಾದ ದೊಡ್ಡಬಸಪ್ಪ, ಅನುವುಗಾರ ಮಲ್ಲಪ್ಪ ಇತರರಿದ್ದರು.