ಯುವಜನತೆಯಲ್ಲಿ ಕೃಷಿ ಅರಿವು ಅಗತ್ಯ

byn-1
Published on

ಬೈಂದೂರು: ಕೃಷಿ ಚಟುವಟಿಕೆ ಇಂದು ಕ್ಷೀಣಿಸುತ್ತಿದ್ದರೂ ಹಿರಿಯ ಕೃಷಿಕರೆಲ್ಲರೂ ಇಂದಿಗೂ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅವರಲ್ಲಿರುವ ಕೃಷಿ ಉತ್ಸಾಹ ಇಂದಿನ ಪೀಳಿಗೆ ಯುವಜನರಲ್ಲಿ ಇಲ್ಲದಿರುವುದು ಬೇಸರದ ಸಂಗತಿ ಎಂದು ಶಾಸಕ ಗುರುರಾಜ್ ಗಂಟಿಹೊಳೆ ವಿಷಾದ ವ್ಯಕ್ತಪಡಿಸಿದರು.

ಬೈಂದೂರು ತಾಲೂಕು ಆಡಳಿತ ಕಚೇರಿಯಲ್ಲಿ ತಾಲೂಕಿನ ಅರ್ಹ ಕೃಷಿಕರಿಗೆ ವಿವಿಧ ಸುಧಾರಿತ ಕೃಷಿ ಯಂತ್ರೋಪಕರಣ ವಿತರಿಸಿ ಮಾತನಾಡಿದರು.

ಇಂದು ಆಧುನಿಕ ಕೃಷಿ ಯಂತ್ರೋಪಕರಣ ಸಬ್ಸಿಡಿ ದರದಲ್ಲಿ ಸಿಗುತ್ತಿದ್ದರೂ ಅದನ್ನು ಪಡೆಯಲು ರೈತರು ಮನಸ್ಸು ಮಾಡುತ್ತಿಲ್ಲ. ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕೃಷಿ ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. ಹೊಸ ಆವಿಷ್ಕಾರಗಳ ಮೂಲಕ ಯೋಜನೆ ಹಾಗೂ ಪೂರಕ ಅಂಶಗಳಿಂದ ಕೃಷಿ ಕ್ಷೇತ್ರ ಅಭಿವೃದ್ಧಿ ಸಾಧ್ಯ. ಆಗ ಮಾತ್ರ ಯುವ ಪೀಳಿಗೆ ಕೃಷಿಯಿಂದ ವಿಮುಖರಾಗದಂತೆ ತಡೆಯಬಹುದು ಎಂದರು.

ಬೈಂದೂರು ಹೋಬಳಿ ಸುಮಾರು 08 ಫಲಾನುಭವಿಗಳಿಗೆ ಪವರ್ ಸ್ಟ್ರೀಯರ್, 04 ಫಲಾನುಭವಿಗಳಿಗೆ ಪವರ್ ವೀಡರ್, 02 ಫಲಾನುಭವಿಗಳಿಗೆ ಪವರ್ ಟಿಲ್ಲರ್, 01 ಫಲಾನುಭವಿಗಳಿಗೆ ನಾಟಿ ಯಂತ್ರ, 04 ಫಲನುಭವಿಗಳಿಗೆ ಪಂಪ್‌ಸೆಟ್ ಹಾಗೂ ಪೈಪ್ ಸೇರಿದಂತೆ ಒಟ್ಟು 19 ಮಂದಿ ಅರ್ಹ ರೈತರಿಗೆ ವಿವಿಧ ಸವಲತ್ತು ವಿತರಿಸಿದರು. ತಹಸೀಲ್ದಾರ್ ಭೀಮ್‌ಸೇನ್ ಕುಲಕರ್ಣಿ ಹಾಗೂ ಇಲಾಖಾಧಿಕರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net