

ತಲ್ಲೂರ: ಈ ಭಾಗದ ರೈತರಿಗೆ ಹೊಲಗಳಿಗೆ ತೆರಳಲು ಹಾಗೂ ಅಂತರ್ಜಲ ಮಟ್ಟ ವೃದ್ಧಿಯಾಗಿ ಕೃಷಿ ಚಟುವಟಿಕೆಗಳಿಗೆ ಬ್ಯಾರೇಜ್ ಅನುಕೂಲವಾಗಲಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಜಾಲಿಕಟ್ಟಿ&ಜೀವಾಪುರ ರಸ್ತೆಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಯೋಜನೆಯಡಿ 1.50 ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್ ಕಂ ಬ್ರೀಡ್ಜ್ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮುಂಬರುವ ದಿನಗಳಲ್ಲಿ ಯರಗಟ್ಟಿ ಭಾಗದ ಜನರಿಗೆ ಸಂಪೂರ್ಣ
ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ ಮಾತನಾಡಿ, ಗ್ಯಾರಂಟಿ ಯೋಜನೆಗಳ ಜತೆಗೆ ಸರ್ಕಾರ ಅಭಿವೃದ್ಧಿ ಕೈಗೊಂಡಿದೆ ಎಂದು ತಿಳಿಸಿದರು.
ಮುಖಂಡರಾದ ವೆಂಕಣ್ಣ ಯರಡ್ಡಿ, ಕಲ್ಮೇಶ ಬಾಲರಡ್ಡಿ, ಮುತ್ತನಗೌಡ ನಾಯ್ಕರ, ಪುಟ್ಟು ಅರಳಿಕಟ್ಟಿ, ಬಸವರಾಜ ಗಿರೆಡ್ಡಿ, ರಮೇಶ ಅರಳಿಕಟ್ಟಿ, ಶಾಶಪ್ಪ ಗೋಪಾಳಿ, ಪ್ರವಿಣ ಯರಡ್ಡಿ, ಬಸು ತಳವಾರ, ಹನುಮಂತ ಅರೇಬೆಂಚಿ, ಪ್ರಕಾಶ ಚೌರೆಡ್ಡಿ, ಶಿವನಗೌಡ ನಾಯ್ಕರ, ಶಂಕರ ಹುಬ್ಬಳ್ಳಿ, ತಿಪ್ಪಣ್ಣ ಕಡಬಿ, ಮಲನಾಯ್ಕ ನಾಯ್ಕರ, ಬಸವರಾಜ ಬನಪ್ಪನವರ, ಬಸಯ್ಯ ಅಟಿಗಲ್ಲ, ಸದಾ ಕುರಿ, ಮಹಾದೇವಯ್ಯ ಪೂಜೇರ, ಶಶಿಧರ ತಳವಾರ, ಸುಭಾನಿ ಕುದರಿ, ಮಹಾಂತೇಶ ಉಪ್ಪಿನ, ಬಸನಾಯ್ಕ ಚಿಕಾಕಿ, ಪಡೆಪ್ಪ ನರಿ, ಆರ್.ಕೆ.ಪಟಾತ, ಪ್ರಕಾಶ ಮುರಗೋಡ ಇತರರಿದ್ದರು.