ಅಗ್ನಿಪಥ ಯೋಜನೆ ವಿರೋಧಿಸುವವರು ಮೂರ್ಖರು: ಕಾಂಗ್ರೆಸ್​ ವಿರುದ್ಧ ಸಚಿವ ಎ.ನಾರಾಯಣಸ್ವಾಮಿ ಕಿಡಿ

Narayanaswamy
Published on

ಆನೇಕಲ್: ಅಗ್ನಿಪಥ ಯೋಜನೆ ವಿರೋಧಿಸಿ ಪ್ರತಿಭಟಿಸುವವರು ಮೂರ್ಖರು ಎಂದು ಕಾಂಗ್ರೆಸ್​ ವಿರುದ್ಧ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕಿಡಿ ಕಾರಿದ್ದಾರೆ.

ಯೋಜನೆ ವಿರುದ್ಧ ಪ್ರತಿಭಟನೆ ಮಾಡುವವರಿಗೆ ಮಾಹಿತಿ ಇಲ್ಲ, ಇದಕ್ಕೆ ಕಾಂಗ್ರೆಸ್ಸಿಗರು ಕುಮ್ಮಕ್ಕು ನೀಡಿ ಪ್ರತಿಭಟನೆ ಮಾಡಿಸುತ್ತಿದ್ದಾರೆ ಎಂದು ಹೇಳಿದರು.

ಈ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾಗಿದೆ.ಯೋಜನೆಯ ಅರ್ಥ ತಿಳಿಯದೆ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ರಕ್ಷಣಾ ಪಡೆಯ ಉದ್ಯೋಗವಲ್ಲ, 17 ವರ್ಷದಲ್ಲೇ ಅಡ್ಮಿಶನ್​ ಕೊಟ್ಟು ತರಬೇತಿ ನೀಡುವ ಕಾರ್ಯಾಗಾರವಾಗಿದೆ. ರಕ್ಷಣಾ ಯೋಜನೆಯಲ್ಲಿ ತರಬೇತಿ ಪಡೆಯುವ ಮೂಲಕ ತಾಂತ್ರಿಕ ಶಿಕ್ಷಣ ನೀಡಲಾಗುತ್ತದೆ ಎಂದರು.

ಈ ಯೋಜನೆ ಬಗ್ಗೆ ಮಾಹಿತಿ ತಿಳಿಯದೇ ಹೋರಾಟಗಳು ನಡೆಯುತ್ತಿವೆ. ಕಾಂಗ್ರೆಸ್ಸಿನವರು ಕೂಡ ಪ್ರತಿಭಟನೆ ಮಾಡಲು ಹೊರಟಿದ್ದಾರೆ. ವಿಶೇಷವಾದ ತಾಂತ್ರಿಕ ಜ್ಞಾನ ಕೊಡುವ ಯೋಜನೆ ಇದಾಗಿದೆ.ಮೀಸಲಾತಿಯ ಸದುಪಯೋಗ ಪಡೆದು ವಿದ್ಯಾರ್ಥಿಗಳಿಗೆ ತಾಂತ್ರಿಕವಾಗಿ ಬೆಳೆಯಲು ಇದು ಅವಕಾಶ ಕಲ್ಪಿಸಲಿದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net