More

    ಜನರಿಗೆ ತೊಂದರೆ ಕೊಟ್ಟು ದೇಶ ಕಾಯೋಕೆ ಆಗುತ್ತಾ? ಅಗ್ನಿಪಥದ ವಿರೋಧಿಗಳಿಗೆ ಕೃಷಿ ಸಚಿವರ ಸವಾಲ್​

    ಧಾರವಾಡ: ಅಗ್ನಿಪಥ ಮಹತ್ತರವಾದ ಯೋಜನೆ, ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ಪ್ರತಿಭಟನೆ ಮಾಡುವ ಹೆಸರಿನಲ್ಲಿ ಹಿಂಸಾಚಾರಕ್ಕೆ ಇಳಿದಿರುವುದು ತಪ್ಪು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್​ ಹೇಳಿದ್ದಾರೆ.

    ನಾಲ್ಕು ವರ್ಷದ ಸೇವೆ ಬಳಿಕ ಬೇಕಾದ ವೃತ್ತಿಯನ್ನು ಆರಿಸಿಕೊಳ್ಳಬಹುದು, ಅದರಲ್ಲಿ ಮೀಸಲಾತಿ ಸಹ ಇರುತ್ತೆ, ಹಾಗಾದರೆ ಪ್ರತಿಭಟನೆ ಮಾಡುವವರೆಲ್ಲಾ ಸೇನೆ ಸೇರಬಯಸುವವರು ಅಲ್ಲವೇ ಎಂದು ಕಾಂಗ್ರೆಸ್​ ನಾಯಕರಿಗೆ ಪ್ರಶ್ನಿಸಿದ್ದಾರೆ.

    ಸೇನೆಗೆ ಸೇರುವ ಉದ್ದೇಶವೇ ದೇಶ ರಕ್ಷಣೆಯಾಗಿದೆ, ಯಾರಾದರೂ ದೇಶ ಪ್ರೇಮ ತೋರಿಸುವವರು ರೈಲ್ವೆಗೆ ಬೆಂಕಿ ಹಾಕ್ತಾರಾ. ಜನರಿಗೆ ತೊಂದರೆ ಕೊಟ್ಟು ದೇಶ ಕಾಯುವುದಕ್ಕೆ ಸಾಧ್ಯವೇ ಎಂದು ಹೇಳಿದ್ದಾರೆ.

    ಇವೆಲ್ಲಾ ಕಿಡಿಗೇಡಿಗಳ ಕುತಂತ್ರವಾಗಿದ್ದು, ಕೆಲವರು ಉದ್ದೇಶಪೂರ್ವಕವಾಗಿಯೇ ಪ್ರಚೋದಿಸುತ್ತಿದ್ದಾರೆ. ಇದಕ್ಎಕ ಯುವಕರು ಬಲಿಯಾಗಬಾರದು. ಕಾಂಗ್ರೆಸ್​ ಪಕ್ಷ ಎಲ್ಲಾ ಕಡೆ ಅದೇ ಕೆಲಸ ಮಾಡುತ್ತಿದೆ. ರಾಹುಲ್ ಗಾಂಧಿಗೆ ವಿಚಾರಣೆ ಕರೆದರೆ ಅದಕ್ಕೂ ಪ್ರತಿಭಟನೆ ಮಾಡಿದ್ದಾರೆ. ಹಿಂದೆ ಖರ್ಗೆ ಅವರಿಗೆ ಇಡಿ ವಿಚಾರಣೆ ಮಾಡಿದಾಗ ಒಬ್ಬರೂ ಪ್ರತಿಭಟಿಸಲಿಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ದೇಶವಿರೋಧಿ ಚಟುವಟಿಕೆಗಳಲ್ಲಿ ಕಾಂಗ್ರೆಸ್​ ಕೈವಾಡವಿದೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

    ಸಿಕಂದರಾಬಾದ್​​ ಹಿಂಸಾಚಾರದಲ್ಲಿ ಮಾಜಿ ಸೈನಿಕನ ಕೈವಾಡ ಬಯಲು! ಪೊಲೀಸರಿಂದ ಮಾಸ್ಟರ್​ ಮೈಂಡ್​ ಅರೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts