

ಹೊನ್ನಾಳಿ: ನೊಂದವರ ಧ್ವನಿಯಾಗಿ ಎಲ್ಲ ಹಿಂದುಳಿದವರ ಪರವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರಿಗೆ ಸಲ್ಲುತ್ತದೆ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಭಾನುವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅರಸು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಹಿಂದುಳಿದ ವರ್ಗಗಳ ಮಕ್ಕಳಿಗಾಗಿ ರಾಜ್ಯದ ಎಲ್ಲ್ಲ ಕಡೆ ವಿದ್ಯಾರ್ಥಿನಿಲಯ ಆರಂಭಿಸಿದ್ದು ಅವರ ಶ್ರೇಯ. ಆ ಕಾರಣಕ್ಕಾಗಿ ಅರಸು ಅವರನ್ನು ನೊಂದವರ ಧ್ವನಿ ಎಂದು ಕರೆಯುತ್ತಾರೆ ಎಂದರು.
ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಸೀಲ್ದಾರ್ ತಿರುಪತಿ ಪಾಟೀಲ್ ಮತ್ತಿತರರಿದ್ದರು.