ಕಮಲಾಪುರ ತಾಲೂಕು ವ್ಯಾಪ್ತಿಗೆ ಅರಣಕಲ್ ಗ್ರಾಪಂ

Kembale
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಾಳಗಿ ತಾಲೂಕು ವ್ಯಾಪ್ತಿಗೆ ಹೋಗಿದ್ದ ಅರಣಕಲ್ ಗ್ರಾಮ ಪಂಚಾಯಿತಿ ಕೇಂದ್ರ ಸೇರಿ ಬುಗಡಿ ತಾಂಡಾ, ಸಿಂಗ್ಯಾಣಿ ತಾಂಡಾ, ಕಿಂಡಿ ತಾಂಡಾ,ರೇವಗ್ಗಿ, ಗೊಣಗಿ ಗ್ರಾಮಗಳನ್ನು ಕಮಲಾಪುರ ತಾಲೂಕು ವ್ಯಾಪ್ತಿಗೆ ಸೇರಿಸಿ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ತಾಲೂಕು ಹೋರಾಟ ಸಮಿತಿ ಪ್ರಮುಖರು, ಸಿಹಿ ಹಂಚಿ ಸಂಭ್ರಮಿಸಿದರು.
 ಅರಣಕಲ್ ಗ್ರಾಪಂ ಕಾಳಗಿ ತಾಲೂಕಿನ ವ್ಯಾಪ್ತಿಗೆ ಸೇರಿದ್ದರಿಂದ ಇಲ್ಲಿನ ಜನರು ಸರ್ಕಾರಿ ಕಚೇರಿಗಳ ಕೆಲಸ ಕಾರ್ಯಗಳಿಗೆ ದೂರದ ಕಾಳಗಿ, ಸೇಡಂನ್ನು ಅವಲಂಭಿಸುವAತಾಗಿತ್ತು.  ಸರ್ಕಾರಿ ಕೆಲಸಗಳಿಗೆ ಬರುವುದು ಇಲ್ಲಿನ ಜನರಿಗೆ ಸವಾಲಾಗಿತ್ತು. ಹಾಗಾಗಿ ಕೆಲವೇ ಕಿಲೊ ಮೀಟರ್ ಅಂತರದಲ್ಲಿರುವ ಕಮಲಾಪುರಕ್ಕೆ ಸೇರಿಸಲು ಗ್ರಾಮಸ್ಥರು ಹಾಗೂ ತಾಲೂಕು ಹೋರಾಟ ಸಮಿತಿ ಕೋರ್ಟ್ ಮೆಟ್ಟಿಲೇರಿದ್ದರು.
 ಆಗ ಕೋರ್ಟ್ ಕೇವಲ ಅರಣಕಲ್ ಗ್ರಾಮ ಮಾತ್ರ ಸೇರ್ಪಡೆ ಮಾಡುವಂತೆ ಆದೇಶ ನೀಡಿತ್ತು. ನಂತರ  ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಗಳ ಮೂಲಕ ಸಂಪೂರ್ಣ ಅರಣಕಲ್ ಗ್ರಾಪಂ ಕಮಲಾಪುರಕ್ಕೆ ಸೇರಿಸಲು ಮನವಿ ಸಲ್ಲಿಸಿದರು. ಜನರ  ಮನವಿ ಮನ್ನಿಸಿದ ಸರ್ಕಾರ ಅರಣಕಲ್ ಗ್ರಾಪಂ ಕೇಂದ್ರ ಸ್ಥಾನ ಸೇರಿ ವಿವಿಧ ಗ್ರಾಮಗಳನ್ನು  ಸೇರ್ಪೆಡೆಗೊಳಿಸಿ ಆದೇಶ ಹೊರಡಿಸಲಾಗಿದಡ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net