ವಿವೇಕದಿಂದ ಮಾತನಾಡುವುದು ಪ್ರಿಯಾಂಕ್ ಖರ್ಗೆ ಕಲಿಯಿರಿ : ಡಾ.ಸುಧಾ ಹಾಲಕಾಯಿ

Dr.Sudha Halakai
Published on

ಪ್ರಚಾರಕ್ಕಾಗಿ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಸಚಿವರು ಡಾ.ಹಾಲಕಾಯಿ ತಿರುಗೇಟು

ವಿಜಯವಾಣಿ ಸುದ್ದಿಜಾಲ ಕಲಬುರಗಿ

ವಿವೇಚನೆ ಇಲ್ಲದೇ ಯೋಚನೆ ಮಾಡದೆ ಮಾತನಾಡುವುದನ್ನೇ ಕಾಯಕ ಮಾಡಿಕೊಂಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇನ್ನಾದರೂ ಸ್ವಲ್ಪ ವಿವೇಕದಿಂದ ಮಾತನಾಡುವುದು ಕಲಿತಯಿರಿ ಎಂದು ಬಿಜೆಪಿ ರಾಜ್ಯ ವಕ್ತಾರೆ ಡಾ.ಸುಧಾ ಹಾಲಕಾಯಿ ತಿರುಗೇಟು ನೀಡಿದ್ದಾರೆ.

ಬಿಜೆಪಿ ತನ್ನ ಸಂವಿಧಾನದೊಳಗಡೆ ಸೋಷಿಲಿಸ್ಟ್, ಸೆಕ್ಯೂಲರಿಸ್‌ಂ ಪದ ಹಾಕಿಕೊಂಡಿದೆ ಎಂಬುದು ಪ್ರದರ್ಶನ ಮಾಡಿದ್ದನ್ನು ಹಲವಾರು ಸಲ ನೋಡಿದ ನಂತರವೂ ಸಾಮಾನ್ಯ ತಿಳುವಳಿಕೆ ಇಲ್ಲದಂತೆ ಮಾತನಾಡುತ್ತಿರುವುದು, ಸುಳ್ಳು ಆರೋಪ ಮಾಡುವುದು ಶೋಭೆಯಲ್ಲ ಎಂದು ತಿಳಿಸಿದ್ದಾರೆ.

ಜಿ¯್ಲೆಯ ಉಸ್ತುವಾರಿ ಹೊಣೆ ಹೊತ್ತಿರುವ ಅವರು ಅಭಿವೃದ್ಧಿ ಕಾರ್ಯಗಳನ್ನು ಮಾಡದೆ. ವರ್ಷಪೂರ್ತಿ ಮಾತನಾಡುವುದನ್ನೇ ಪ್ರಗತಿ ಅಂದುಕೊAಡಿರುವAತಿದೆ. ಚುನಾವಣಾ ಆಯೋಗ ರಾಜಕೀಯ ಪP್ಷÀದ ನೋಂದಣಿ ಮಾಡಿಕೊಳ್ಳಬೇಕಾದರೆ ಹಲವಾರು ಷರತ್ತು ವಿಧಿಸಿರುತ್ತದೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು.ನೋಂದಣಿ ನಿಯಮ ಪ್ರಕಾರ ಎಲ್ಲ ರಾಜಕೀಯ ಪP್ಷÀಗಳು ಭಾರತದ ಸಾರ್ವಭೌಮತ್ವ ಮತ್ತು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಣೆ ಮಾಡುತ್ತೇವೆ ಎಂದು ಚುನಾವಣೆ ಆಯೋಗಕ್ಕೆ ಪ್ರಮಾಣ ಪತ್ರ ಸಲ್ಲಿಸಲಾಗಿರುತ್ತದೆ.ಆದರೆ, ಅದನ್ನೇ ಪ್ರಿಯಾಂಕ್ ಖರ್ಗೆ ಅವರು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಆದರೆ, ಸಚಿವ ಪ್ರಿಯಾಂಕ್ ಖರ್ಗೆ ಅವರು ಅದೆಲ್ಲವನ್ನು ಮರೆತು ತಮ್ಮ ಅಲ್ಪ ತಿಳುವಳಿಕೆಯನ್ನು ರಾಜಕೀಯ ದುರುz್ದÉÃಶಕ್ಕಾಗಿ ಬಳಸಿಕೊಳ್ಳುವುದು ಅವರ ಜಾಯಮಾನವಾಗಿರುವಂತಿದೆ. ಯಾವ ಪ್ರಗತಿ ಕಾರ್ಯ ಮಾಡದೆ, ತಂದೆಯ ನೆರಳಿನಲ್ಲಿ ರಾಜಕಾರಣ ಮಾಡುತ್ತಿರುವ ಅವರಿಗೆ ಕನಿಷ್ಠ ಸಾಮಾನ್ಯ ತಿಳುವಳಿಕೆ ಇಲ್ಲದಿರುವುದು ಕರ್ನಾಟಕದ ಪಾಲಿಗೆ ದುರಂತವೇ ಸರಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸದಾ ಪ್ರಚಾರದಲ್ಲಿರಲು ಬಯಸುವ ಸಚಿವ ಪ್ರಿಯಾಂಕ್ ಖರ್ಗೆಯವರು ಅನಾವಶ್ಯಕವಾಗಿ ಇಡೀ ದೇಶದಲ್ಲಿ ತನ್ನ ಬಗ್ಗೆ ಚರ್ಚೆ ನಡೆಯಲಿ ಎನ್ನುವ ಹಪಾಹಪಿಯಿಂದ ರಾಷ್ಟಿçÃಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಬೇಕು ಎಂದು ಒತ್ತಾಯಿಸುತ್ತಾರೆ. ಅವರ ಹೊಣೆ ನಿರ್ವಹಣೆ ಮಾಡಲು ವಿಫಲರಾಗಿರುವ ಸಚಿವರು ಅನಾವಶ್ಯಕವಾಗಿ ಮೂಲಭೂತ ಸಿದ್ಧಾಂತಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಹಲವಾರು ದಶಕಗಳಿಂದ ರಾಷ್ಟç ನಿರ್ಮಾಣ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವAತಹ ಆರೆಸ್ಸೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಹೀಗಾಗಿಕೂಡಲೇ ನಿಮ್ಮ ವ್ಯರ್ಥ ಪ್ರಲಾಪಗಳನ್ನು ನಿಲ್ಲಿಸಿ ಎಂದು ಡಾ.ಹಾಲಕಾಯಿ ಸಲಹೆ ನೀಡಿದ್ದಾರೆ.

======

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net