ನಾರಾಯಣ ಗುರು ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳಿ

07M.D.R.4
Published on

ಮದ್ದೂರು: ತಾಲೂಕು ಆಡಳಿತ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಚಳವಳಿ ನೇತಾರ ಶ್ರೀ ನಾರಾಯಣ ಗುರು ಜಯಂತಿ ಭಾನುವಾರ ಆಚರಣೆ ಮಾಡಲಾಯಿತು.

ಗ್ರೇಡ್- 2 ತಹಸೀಲ್ದಾರ್ ಸೋಮಶೇಖರ್ ಮಾತನಾಡಿ, ಶ್ರೀ ನಾರಾಯಣ ಗುರು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದ್ದರು. ಸಮಾನತೆಗಾಗಿ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದರು. ಇವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಶ್ರೀ ನಾರಾಯಣ ಗುರು ಕೇರಳದಲ್ಲಿ ಹುಟ್ಟಿದ ಇವರು ಶೂದ್ರರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಹೋರಾಡಿದ ಮಹಾ ಪುರುಷ. ಶ್ರೀ ನಾರಾಯಣ ಗುರು ಕೇರಳದಲ್ಲಿ ಜಾತಿ ಮತ ಭೇದ ಹೆಚ್ಚಾಗಿರುವುದನ್ನು ಕಂಡು ಅದರ ವಿರುದ್ಧ ಹೋರಾಡಿದ ಸಮಾಜ ಸುಧಾರಕರು. ಪ್ರತಿಯೊಬ್ಬರೂ ವಿದ್ಯಾವಂತರಾದರೆ ಸಮಾಜ ಬದಲಾವಣೆ ಸಾಧ್ಯ ಎಂದು ಸಾರಿದ ಮಹಾನ್ ವ್ಯಕ್ತಿ ಎಂದರು. ಇವರ ಆಶಯದಂತೆ ಅಂಬೇಡ್ಕರ್ ಅವರು ಸಂವಿಧಾನದ ಪೀಠಿಕೆಯಲ್ಲಿ ಸಮಾನತೆ, ಸಹೋದರತ್ವ, ಸಹಬಾಳ್ವೆ ಸಂದೇಶವನ್ನು ಅಳವಡಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರ್ಯ ಈಡಿಗರ ಸಂಘ ಅಧ್ಯಕ್ಷ ಎ.ಎಚ್.ನಾರಾಯಣ ಸ್ವಾಮಿ, ಅರ್ಯ ಈಡಿಗರ ಸಂಘ ಗೌರವಾಧ್ಯಕ್ಷ ತಮ್ಮಣ್ಣ, ಉಪಾಧ್ಯಕ್ಷ ಓಬಳರಂಗ, ಕಾರ್ಯದರ್ಶಿ ಶ್ರೀನಿವಾಸ ಹಾಗೂ ಮುಖಂಡರಾದ ಗೋವಿಂದರಾಜು, ಅರೆಕಲ್ಲುದೊಡ್ಡಿ ನಾರಾಯಣ ಸ್ವಾಮಿ, ಶಿವಪ್ಪ, ನಾಗರಾಜ್, ಸುರೇಶ್, ಸೌಮ್ಯಾ ಶ್ರೀನಿವಾಸಶೆಟ್ಟಿ, ಪಿ.ಶಶಿಕುಮಾರ್, ತೈಲೂರು ಆನಂದಾಚಾರಿ, ಪುಟ್ಟಲಿಂಗಯ್ಯ, ಮಹದೇವ, ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net