ಶ್ರೀರಾಮನ ಆದರ್ಶವನ್ನು ಅಳವಡಿಸಿಕೊಳ್ಳಿ

22hgr 1
ಹಲಗೂರಿನ ಚನ್ನಪಟ್ಟಣ ರಸ್ತೆಯಲ್ಲಿರುವ ಭಿಕ್ಷುದ ಮಠದ ಆವರಣದಲ್ಲಿ ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿರುವ ಭಕ್ತರು.
Published on

ಹಲಗೂರು: ಪ್ರತಿಯೊಬ್ಬರೂ ಶ್ರೀ ರಾಮನ ಆದರ್ಶ ವ್ಯಕ್ತಿತ್ವ ಹಾಗೂ ಅವರ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಗುರುವಿನ ಪುರದ ಜಗದೀಶ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಚನ್ನಪಟ್ಟಣ ರಸ್ತೆಯಲ್ಲಿರುವ ಭಿಕ್ಷದ ಮಠದ ಆವರಣದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾನ ಅಂಗವಾಗಿ ಇಲ್ಲಿನ ಭಕ್ತರು ಶ್ರೀರಾಮನ ಭಾವಚಿತ್ರಕ್ಕೆ ಸೋಮವಾರ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು. ಈ ದಿನ ದೇಶಾದ್ಯಂತ ಸಂಭ್ರಮದಿಂದ ರಾಮೋತ್ಸವವನ್ನು ಆಚರಿಸಲಾಗುತ್ತಿದೆ. ಶ್ರೀರಾಮನ ಜೀವನ ಅತ್ಯಂತ ಪವಿತ್ರತೆಯಿಂದ ಕೂಡಿದ್ದು, ಶ್ರೀಸಾಮಾನ್ಯರು ರಾಮನ ಆದರ್ಶ ವ್ಯಕ್ತಿತ್ವ, ಆದರ್ಶ ಪಾಲಿಸಬೇಕು ಎಂದರು.

ಎಚ್.ಎಂ.ಪಾಲಾಕ್ಷಪ್ಪ, ರೇವಣ್ಣ, ಕೆ.ಎನ್.ನಾಗೇಂದ್ರ, ಮಂಜು, ವಿನಯ, ಕೆ.ಎಸ್.ರಾಜು, ನಾಗೇಶ, ನಾಗಣ್ಣ, ಎಚ್.ಎಂ.ಆನಂದ್‌ಕುಮಾರ್, ಅಶ್ವತ್ಥನಾರಾಯಣ, ಕೆ.ವಿ.ಟಿ.ಕುಮಾರ, ಪುಟ್ಟರಾಜು, ಅಕ್ಕಿಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net