ಶುಭ್ರ ಮನಸ್ಕರಾಗಲು ಗಾಂಧಿಜೀ ಚಿಂತನೆ ಅಳವಡಿಸಿಕೊಳ್ಳಿ

2sirsi2bhimanna naik
Published on

ಶಿರಸಿ: ಮಹಾತ್ಮಾ ಗಾಂಧೀಜಿ ಅವರ ಚಿಂತನೆಯನ್ನು ನಾವು ಸಂಪೂರ್ಣವಾಗಿ ಅಳವಡಿಸಿಕೊಂಡಲ್ಲಿ ಶುಭ್ರ ಮನಸ್ಕರಾಗುತ್ತೇವೆ. ದೇಶದ ಸುಸ್ಥಿರ ಅಭಿವೃದ್ಧಿಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗಬೇಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನಗರದ ಬಿಡ್ಕಿ ಬೈಲಿನಲ್ಲಿ ಸೋಮವಾರ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಕೆ.ಎನ್. ಹೊಸ್ಮನಿ ಮಾತನಾಡಿ, ಇಡೀ ಪ್ರಪಂಚಕ್ಕೆ ಆದರ್ಶ ವ್ಯಕ್ತಿತ್ವ ನಮ್ಮ ಗಾಂಧಿಜೀಯವರದ್ದಾಗಿದೆ. ಅವರ ಜೀವನ ಶೈಲಿಯಲ್ಲಿ ಮಕ್ಕಳಿಗೆ ಪ್ರೇರಣೆ ಆಗುವ ಹಲವು ಅಂಶಗಳಿವೆ. ಸತ್ಯ ಮತ್ತು ಅಹಿಂಸೆಯ ಮೂಲಕ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದವರು ಎಂದರು.
ತಹಸೀಲ್ದಾರ್ ಶ್ರೀಧರ ಮುಂದಲಮನಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ದೀಪಾ ಮಹಾಲಿಂಗಣ್ಣ, ಮಾಜಿ ಅಧ್ಯಕ್ಷ ಗಣಪತಿ ನಾಯ್ಕ, ವೀಣಾ ಶೆಟ್ಟಿ ಇತರರಿದ್ದರು.

ಜಾಗೃತಿ ಮೂಡಿಸಿದ ಶಾಸಕರು…
ಶಿರಸಿಯ ಬಿಡ್ಕಿ ಬೈಲಿನಲ್ಲಿ ಪೊರಕೆ ಹಿಡಿದ ಭೀಮಣ್ಣ ಅಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಬಳಿಕ ಬಿಡ್ಕಿ ಬೈಲಿನ ಅಂಗಡಿಗಳಿಗೆ ತೆರಳಿ ತ್ಯಾಜ್ಯವನ್ನು ಕಡಿಮೆ ಮಾಡುವ ಬಗ್ಗೆ ಮತ್ತು ವ್ಯವಸ್ಥಿತ ನಿರ್ವಹಣೆ ಬಗ್ಗೆ ಅಂಗಡಿಕಾರರೊಂದಿಗೆ ಚರ್ಚೆ ನಡೆಸಿ ಜಾಗೃತಿ ಕರಪತ್ರ ವಿತರಿಸಿದರು. ಬಳಿಕ ಹಳೇ ಬಸ್ ನಿಲ್ದಾಣಕ್ಕೆ ತೆರಳಿ ಪ್ರಯಾಣಿಕರೊಂದಿಗೆ ರ್ಚಚಿಸಿದರು. ನಂತರ ಬಸ್ ಏರಿ ಚಾಲಕ, ನಿರ್ವಾಹಕರ ಕುಂದುಕೊರತೆ ಆಲಿಸಿದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net